ಜೈಪುರ್:ರಾಜಸ್ಥಾನದ ಉದಯಪುರ್ದಲ್ಲಿ ಗರ್ಭಿಣಿ ಮೇಲೆ ಕಾಮುಕರು ಅತ್ಯಾಚಾರವೆಸಗಿ ಭ್ರೂಣವನ್ನೇ ಹೊರತೆಗೆದು ಪರಾರಿಯಾಗಿದ್ದಾರೆ.
2016ರ ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್ರೇಪ್ ರೀತಿಯಲ್ಲೇ ಈ ಘಟನೆ ನಡೆದಿದೆ. ಜುಲೈ 13ರಂದು ಮೋಟರ್ಬೈಕ್ ಮೇಲೆ ಗೆಳೆಯನೊಂದಿಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿರುವ ಮೂವರು ಕಾಮುಕರು ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ಗಳಿಂದ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ನಂತರ ಮಹಿಳೆಯನ್ನ ಹತ್ತಿರದ ಬಸ್ ಸ್ಯಾಂಡ್ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ಮತ್ತೊಂದು ಸ್ಥಳಕ್ಕೆ ಆಕೆಯನ್ನ ಕರೆದುಕೊಂಡು ಹೋಗಿ ಅಲ್ಲಿ ಮತ್ತಿಬ್ಬರಿಂದ ಅತ್ಯಾಚಾರ ಮಾಡಿಸಿದ್ದಾರೆ.