ಉಧಂಪುರ(ಜಮ್ಮು-ಕಾಶ್ಮೀರ): ಕಾರು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಸಾವನ್ನಪ್ಪಿ, ಇತರ ಐವರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಉದಂಪುರದಲ್ಲಿ ನಡೆದಿದೆ.
ಕಂದಕಕ್ಕೆ ಉರುಳಿ ಬಿದ್ದ ಕಾರು: ಗರ್ಭಿಣಿ ಸಾವು, ಐವರಿಗೆ ಗಂಭೀರ ಗಾಯ! - ಜಮ್ಮು-ಕಾಶ್ಮೀರ ಸುದ್ದಿ
ಜಮ್ಮು-ಕಾಶ್ಮೀರದ ಉಧಂಪುರ್ ಎಂಬಲ್ಲಿ ಕಾರು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ.
car falls into gorge
ಚೆನಾನಿ ಎಂಬ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡಿರುವ ಕಾರು ಏಕಾಏಕಿ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಈಗಾಗಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ಕೆಶ್ವಾನ್ ಎಂಬಲ್ಲಿ ಮಿನಿ ಬಸ್ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 35 ಜನ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು.