ಮಲ್ಕಾಜ್ಗಿರಿ (ತೆಲಂಗಾಣ): ಗಂಡನ ಮನೆಯವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ಐದು ತಿಂಗಳ ಗರ್ಭಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯ ಪಪಿರೆಡ್ಡಿ ನಗರದಲ್ಲಿ ಈ ಘಟನೆ ನಡೆದಿದೆ.
ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಐದು ತಿಂಗಳ ಗರ್ಭಿಣಿ ಆತ್ಮಹತ್ಯೆ - pregnant woman died
ತೆಲಂಗಾಣದಲ್ಲಿ ಕಿರುಕುಳಕ್ಕೆ ಬೇಸತ್ತ ಗರ್ಭಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡಿದ ಪತಿ ಆತನ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೃಷ್ಣ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ ಎಂದು ತಿಳಿದು ಬಂದಿದೆ. ಮಗಳ ಪತಿ ಮತ್ತು ಅಳಿಯಂದಿರು ವರದಕ್ಷಿಣೆಗಾಗಿ ಆಗ್ಗಾಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮೃತ ಗರ್ಭಿಣಿಯ ತಾಯಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ತಿಂಗಳ ಗರ್ಭಿಣಿಯಾಗಿದ್ದ ಕೃಷ್ಣ ಪ್ರಿಯಾ ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದ್ಗಿರಿ ಗುಟ್ಟಾ ಪಿಎಸ್ಐ ಮಾಹಿತಿ ನೀಡಿದ್ದಾರೆ. ವರದಕ್ಷಿಣೆ ಕೋರಿ ಪ್ರಿಯಾಳ ಪತಿ ಮತ್ತು ಅಳಿಯಂದಿರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮೃತ ಗರ್ಭಿಣಿಯ ತಾಯಿ ದೂರು ನೀಡಿದ್ದಾರೆ. ಈ ಬಗ್ಗೆ ಬೇರೆ ಬೇರೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎನ್ನಲಾಗುತ್ತಿದೆ.