ಕರ್ನಾಟಕ

karnataka

ETV Bharat / bharat

ಆ್ಯಂಬುಲೆನ್ಸ್ ಇಲ್ಲ, ಗರ್ಭಿಣಿಯನ್ನು ನದಿ ದಾಟಿಸಿದ್ದು ಹೇಗೆ ಗೊತ್ತಾ! - ಬಾಸ್ಕೆಟ್​ನಲ್ಲಿ ಗರ್ಭಿಣಿಯ ಸಾಗಾಟ

ಮರದ ಕೋಲೊಂದಕ್ಕೆ ಬುಟ್ಟಿಯೊಂದನ್ನು ಕಟ್ಟಿ ಅದರಲ್ಲಿ ಗರ್ಭಿಣಿಯನ್ನು ಕೂರಿಸಿ ನಾಲ್ವರು ಪುರುಷರು ಸೇರಿ ಹೆಗಲು ಕೊಟ್ಟು ನದಿ ದಾಟಿಸಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ನಂತರ ಮಹಿಳೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

pregnant woman carried on makeshift basket
ತಾತ್ಕಾಲಿಕ ಬುಟ್ಟಿಯಲ್ಲಿ ಗರ್ಭಿಣಿ ಸಾಗಾಟ

By

Published : Aug 2, 2020, 2:33 PM IST

ಸುರ್ಗುಜಾ (ಛತ್ತೀಸ್​ಗಢ): ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಆ್ಯಂಬುಲೆನ್ಸ್ ಗ್ರಾಮವನ್ನು ತಲುಪಲು ಸಾಧ್ಯವಾಗದ ಕಾರಣ, ಇಲ್ಲಿನ ಕಡ್ನಾಯ್ ಗ್ರಾಮದಲ್ಲಿ ಗರ್ಭಿಣಿಯೊಬ್ಬಳನ್ನು ತಾತ್ಕಾಲಿಕ ಬುಟ್ಟಿಯೊಂದರಲ್ಲಿ ನದಿ ದಾಟಿಸಿರುವ ಘಟನೆ ನಡೆದಿದೆ.

ಮರದ ಕೋಲೊಂದಕ್ಕೆ ಬುಟ್ಟಿಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಮಲಗಿಸಿ ನಾಲ್ವರು ಪುರುಷರು ಸೇರಿ ಹೆಗಲು ಕೊಟ್ಟು ನದಿ ದಾಟಿದ್ದಾರೆ. ನಂತರ ಮಹಿಳೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ತಾತ್ಕಾಲಿಕ ಬುಟ್ಟಿಯಲ್ಲಿ ಗರ್ಭಿಣಿ ಸಾಗಾಟ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರ್ಗುಜಾ ಕಲೆಕ್ಟರ್ ಸಂಜಯ್ ಕುಮಾರ್ ಝಾ, ಗ್ರಾಮದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳು ಇಲ್ಲ ಎಂಬ ವಿಷಯವಲ್ಲ. ಮಳೆಗಾಲದಲ್ಲಿ ಜನರು ಪ್ರಯಾಣಿಸಲು ಕಷ್ಟವಾಗುವಂತಹ ಕೆಲ ಹಳ್ಳಿಗಳಿವೆ. ಇಂತಹ ಸ್ಥಳಗಳ ಜನರ ಕಷ್ಟವನ್ನು ಕಡಿಮೆ ಮಾಡಲು ಸಣ್ಣ ಕಾರುಗಳನ್ನು ಬಳಸಲು ಆಡಳಿತವು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ಏನೇ ಇದ್ದರು ಇಪ್ಪತ್ತೊಂದನೇ ಶತಮಾನದಲ್ಲೂ ಹಲವು ಗ್ರಾಮಗಳು ಇಂತಹ ಸಮಸ್ಯೆಗಳನ್ನು ಮತ್ತೆ ಮತ್ತೆ ಎದುರಿಸುತ್ತಿರುವುದು ವಿಪರ್ಯಾಸ.

ABOUT THE AUTHOR

...view details