ಹೈದರಾಬಾದ್: ಕೋವಿಡ್-19 ಕಾಣಿಸಿಕೊಂಡ ನಂತರದ 9 ತಿಂಗಳ ಅವಧಿಯಲ್ಲಿ ಸುಮಾರು 116 ಮಿಲಿಯನ್ ಮಕ್ಕಳು ಹುಟ್ಟಲಿದ್ದು, ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಗರ್ಭಿಣಿಯರು ಮತ್ತು ಶಿಶುಗಳ ಆರೋಗ್ಯ ಕಾಪಾಡಲು ಹೆಚ್ಚು ಕಾಳಜಿ ವಹಿಸಬೇಕೆಂದು ಯುನಿಸೆಫ್ ಕರೆ ನೀಡಿದೆ.
ಕೊರೊನಾ ಲಾಕ್‌ಡೌನ್ ಪರಿಣಾಮ: ಗರ್ಭಿಣಿಯರು, ಶಿಶುಗಳಿಗೆ ಆರೋಗ್ಯ ವ್ಯವಸ್ಥೆ ಕೊರತೆಯ ಸವಾಲು
ಜಗತ್ತಿನೆಲ್ಲೆಡೆ ವಿಧಿಸಲಾಗಿರುವ ಲಾಕ್‌ಡೌನ್ ಹಾಗೂ ಕರ್ಫ್ಯೂಗಳಿಂದಾಗಿ ಗರ್ಭಿಣಿಯರು, ನವಜಾತ ಮಕ್ಕಳು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆರೋಗ್ಯ ವ್ಯವಸ್ಥೆಗಳು ಒತ್ತಡದಿಂದ ನಲುಗುತ್ತಿವೆ.
"ಜಗತ್ತಿನೆಲ್ಲೆಡೆ ವಿಧಿಸಲಾಗಿರುವ ಲಾಕ್‌ಡೌನ್ ಹಾಗೂ ಕರ್ಫ್ಯೂಗಳಿಂದಾಗಿ ಗರ್ಭಿಣಿಯರು, ನವಜಾತ ಮಕ್ಕಳು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆರೋಗ್ಯ ವ್ಯವಸ್ಥೆಗಳು ಒತ್ತಡದಿಂದ ನಲುಗುತ್ತಿವೆ. ವೈದ್ಯಕೀಯ ಸಲಕರಣೆಗಳ ಕೊರತೆಯೂ ಸಾಕಷ್ಟಿದೆ. ನುರಿತ ಪ್ರಸೂತಿ ತಜ್ಞರು, ನರ್ಸ್, ಆಯಾಗಳು ಹೀಗೆ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಗರ್ಭಿಣಿ ಹಾಗೂ ಶಿಶುಗಳ ಆರೈಕೆ ಕಷ್ಟವಾಗುತ್ತಿದೆ ಎಂದು ಯುನಿಸೆಫ್ ಹೇಳಿದೆ.
ಕೋವಿಡ್ ನಂತರದ 9 ತಿಂಗಳಲ್ಲಿ ಭಾರತದಲ್ಲಿ 20.1 ಮಿಲಿಯನ್, ಚೀನಾದಲ್ಲಿ 13.5 ಮಿಲಿಯನ್, ನೈಜೀರಿಯಾದಲ್ಲಿ 6.4 ಮಿಲಿಯನ್, ಪಾಕಿಸ್ತಾನದಲ್ಲಿ 5 ಮಿಲಿಯನ್ ಮಕ್ಕಳು ಹುಟ್ಟಲಿವೆ. ಕೋವಿಡ್ ಕಾಣಿಸಿಕೊಳ್ಳುವುದಕ್ಕೂ ಮುಂಚಿನಿಂದಲೇ ಈ ದೇಶಗಳಲ್ಲಿ ಶಿಶುಮರಣ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಸಂಕಷ್ಟದ ಮಧ್ಯೆ ತಾಯಿ ಹಾಗೂ ಶಿಶು ಮರಣಗಳನ್ನು ಕಡಿಮೆ ಮಾಡುವತ್ತ ದೇಶಗಳು ಗಮನಹರಿಸಬೇಕಿದೆ ಎಂದು ಯುನಿಸೆಫ್ ತಿಳಿಸಿದೆ.