ತಿರುವನಂತಪುರಂ:ಕೇರಳದ ತಿರುವನಂತಪುರಂ ಸಮೀಪದ ಪಾಲಕುಲಂಗರನಲ್ಲಿ ಗರ್ಭಿಣಿ ಬೆಕ್ಕನ್ನು ಸಾಯಿಸಿ ತದನಂತರ ಮನೆ ಮುಂದೆ ನೇಣು ಬಿಗಿದ ರೀತಿಯಲ್ಲಿ ನೇತು ಹಾಕಿರುವ ವಿಚಿತ್ರ ಘಟನೆ ನಡೆದಿದೆ.
ಗರ್ಭಿಣಿ ಬೆಕ್ಕಿಗೆ ಮದ್ಯಪಾನ ಕುಡಿಸಿ ಕೊಂದು ಮನೆ ಮುಂದೆ ನೇಣು ಹಾಕಿದ್ರು! - ಗರ್ಭಿಣಿ ಬೆಕ್ಕು ಕೊಂದು ನೇಣು
ಕೇರಳದಲ್ಲಿ ವಿಚಿತ್ರವಾದ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಗರ್ಭಿಣಿ ಬೆಕ್ಕು ಕೊಲೆ
ಕಳೆದ ಭಾನುವಾರವೇ ಈ ಘಟನೆ ನಡೆದಿದ್ದು, ಮನೆಯ ಮುಂದೆ ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ರಕ್ಷಣಾ ವೇದಿಕೆ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಾಣಿ ರಕ್ಷಣಾ ವೇದಿಕೆ ಆರೋಪದ ಪ್ರಕಾರ, ಬೆಕ್ಕಿಗೆ ಮದ್ಯಪಾನ ಮಾಡಿಸಿ ಕೊಲೆ ಮಾಡಲಾಗಿದೆ. ಇದಾದ ಬಳಿಕ ವಿಚಿತ್ರವಾಗಿ ನೇಣಿಗೆ ಹಾಕಲಾಗಿದೆ ಎಂದು ಹೇಳಿದ್ದಾರೆ. ಇನ್ನು ಪ್ರಾಥಮಿಕ ವರದಿ ಪ್ರಕಾರ, ಕಳೆದ ಭಾನುವಾರ ಕೆಲವರು ಈ ಸ್ಥಳದಲ್ಲಿ ಮದ್ಯ ಸೇವಿಸಿ ಜೂಜಾಟ ಆಡುತ್ತಿದ್ದರು. ಅವರೇ ಈ ರೀತಿ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ.