ಚಿತ್ತೂರು(ಆಂಧ್ರಪ್ರದೇಶ): ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಸಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದ ಲ್ಯಾಬ್ ಸ್ಕ್ಯಾಬ್ ಬಡಿದು ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ನಿರ್ಮಾಣ ಹಂತದ ಲ್ಯಾಬ್ ಸ್ಕ್ಯಾಬ್ ಬಡಿದು ಗರ್ಭಿಣಿ ಸಾವು! - ಆಂಧ್ರಪ್ರದೇಶ ಸುದ್ದ
ಆಸ್ಪತ್ರೆಯಲ್ಲಿ ನಿರ್ಮಾಣದ ಹಂತದ ಸ್ಕ್ಯಾಬ್ ಬಡಿದು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
pregent woman died
ಭಾನುವಾರ ರಾತ್ರಿ ಕೆಲಸ ಮಾಡುತ್ತಿದ್ದ ವೇಳೆ ಸ್ಕ್ಯಾಬ್ ಬಡಿದು ರಾಧಿಕಾ ಸಾವನ್ನಪ್ಪಿದ್ದು, ಇತರ ಇಬ್ಬರು ಕೋವಿಡ್ ರೋಗಿಗಳು ಗಾಯಗೊಂಡಿದ್ದರು. ತುರ್ತು ಪರಿಸ್ಥಿತಿ ವಾರ್ಡ್ನಲ್ಲಿ ಹೊಸ ಕೊಠಡಿ ನಿರ್ಮಾಣ ಮಾಡಲಾಗುತ್ತಿತ್ತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕೋವಿಡ್ ಭಯದ ನಡುವೆ ಕೂಡ ಗರ್ಭಿಣಿ ರಾಧಿಕಾ ಸ್ವಯಂ ಪ್ರೇರಣೆಯಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಜಂಟಿ ಕಲೆಕ್ಟರ್ ವೀರಬ್ರಹ್ಮನ್ ಮತ್ತು ಬಿಜೆಪಿ ರಾಜ್ಯ ವಕ್ತಾರ ಭಾನು ಪ್ರಕಾಶ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು.