ಇಂದೋರ್:ಸರ್ಕಾರಿ ಅಧಿಕಾರಿಗೆ ಸಾರ್ವಜನಿಕವಾಗಿ ಬ್ಯಾಟ್‌ನಿಂದ ಹೊಡೆದು ಜೈಲು ಸೇರಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯಾ ಇಂದು ಬಿಡುಗಡೆಯಾದರು. ಮತ್ತೊಮ್ಮೆ ಬ್ಯಾಟ್ ಹಿಡಿಯುವಂತೆ ಸನ್ನಿವೇಶ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದೂ ಹೇಳಿದರು.
ನಿನ್ನೆ ಆಕಾಶ್ಗೆ ಭೋಪಾಲ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದರಿಂದ ಅವರು ಇಂದು ಜೈಲಿನಿಂದ ಹೊರಬಂದರು. ಪಕ್ಷದ ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಿದರು. ಆನಂತರ ತಮ್ಮ ಮನದಾಳ ಬಿಚ್ಚಿಟ್ಟ ಆಕಾಶ್, ಸಾರ್ವಜನಿಕ ಹಿತಾಸಕ್ತಿಯಿಂದ ಈ ಕೆಲಸ ಮಾಡಿದ್ದರಿಂದ ನನಗೆ ಪಾಪಪ್ರಜ್ಞೆ ಇಲ್ಲ. ಜನರ ಹಿತಕ್ಕಾಗಿ ಕೆಲಸ ಮುಂದುವರೆಸುವೆ. ಮತ್ತೊಮ್ಮೆ ಬ್ಯಾಟ್ ಹಿಡಿಯುವ ಅವಕಾಶ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು ಹೇಳಿದ್ದಾರೆ.