ಕರ್ನಾಟಕ

karnataka

By

Published : Apr 21, 2020, 10:03 AM IST

ETV Bharat / bharat

ಮನೆಯಲ್ಲೇ ರಂಜಾನ್​ ಪ್ರಾರ್ಥನೆ ಸಲ್ಲಿಸಿ, ಯಾರನ್ನೂ ಮನೆಗೆ ಆಹ್ವಾನಿಸದಿರಿ: ಕಂಧಲ್ವಿ ಕರೆ

ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಮುಸ್ಲಿಂ ಬಾಂಧವರು ಸ್ಥಳೀಯ ಅಥವಾ ಅಲ್ಲಿನ ಕೇಂದ್ರ ಸರ್ಕಾರಗಳ ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ಕಂಧಲ್ವಿ ಮನವಿ ಮಾಡಿದ್ದಾರೆ. ಲಾಕ್​ಡೌನ್​ ಮುಗಿಯುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ. ಜೊತೆಗೆ ಯಾರನ್ನೂ ಮನೆಗೆ ಆಹ್ವಾನಿಸದಿರಿ ಎಂದು ಹೇಳಿದ್ದಾರೆ.

Pray at home during Ramzan: Tablighi Jamaat leader Maulana Saad to followers
ಮನೆಯಲ್ಲೇ ರಂಜಾನ್​ ಪ್ರಾರ್ಥನೆ ಸಲ್ಲಿಸಿ, ಯಾರನ್ನೂ ಮನೆಗೆ ಆಹ್ವಾನಿಸದಿರಿ: ಕಂಧಲ್ವಿ ಕರೆ

ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ನಗರದಲ್ಲಿ ಧಾರ್ಮಿಕ ಸಭೆ ನಡೆಸಿದ್ದ ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ಕಂಧಲ್ವಿ, ಇದೀಗ ರಂಜಾನ್ ತಿಂಗಳಲ್ಲಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ಯಾರನ್ನೂ ಮನೆಗೆ ಆಹ್ವಾನಿಸದೆ ಕುಟುಂಬಕ್ಕೆ ಸೀಮಿತವಾಗಿ ಹಬ್ಬ ಆಚರಿಸುವಂತೆ ಸಲಹೆ ನೀಡಿದ್ದಾರೆ.

"ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಮುಸ್ಲಿಂ ಬಾಂಧವರು ಸ್ಥಳೀಯ ಅಥವಾ ಕೇಂದ್ರ ಸರ್ಕಾರಗಳ ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಾನು ವಿನಂತಿಸುತ್ತೇನೆ. ಲಾಕ್​ಡೌನ್​ ಮುಗಿಯುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ. ಜೊತೆಗೆ ಯಾರನ್ನೂ ಮನೆಗೆ ಆಹ್ವಾನಿಸದಿರಿ" ಎಂದಿದ್ದಾರೆ.

ಭಾನುವಾರ ಆನ್‌ಲೈನ್ ಬ್ರೀಫಿಂಗ್‌ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾತನಾಡಿ, ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಸಭೆಯನ್ನು ಪ್ರಮುಖ ಕೊರೊನಾ ಹಾಟ್‌ಸ್ಪಾಟ್ ಎಂದೇ ಉಲ್ಲೇಖಿಸಿದ್ದಾರೆ. ರಾಜ್ಯ 'ಕೊರೊನಾ ಕಠಿಣ ಯುದ್ಧದಲ್ಲಿ ಹೋರಾಡುತ್ತಿದ್ದ ವೇಳೆ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳಿಂದ ದೆಹಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಬ್ಲಿಘಿ ಅನುಯಾಯಿಗಳು ಬಂದಿದ್ದು, ವೈರಸ್ ಹರಡಲು ಪ್ರಮುಖ ಕಾರಣವಾಯಿತು ಎಂದು ಹೇಳಿದ್ದರು.

ಏಪ್ರಿಲ್​ ಆರಂಭದಲ್ಲಿ ಬಿಡುಗಡೆಯಾದ ಆಡಿಯೋ ಸಂದೇಶವೊಂದರಲ್ಲಿ, ನಿಜಾಮುದ್ದೀನ್ ಸಭೆಗೆ ಭೇಟಿ ನೀಡಿದ್ದ ನೂರಾರು ಜನರ ವರದಿ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ, ಅವರು ಸ್ವಯಂ-ಸಂಪರ್ಕ ತಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಕಂಧಲ್ವಿ ಹೇಳಿದ್ದರು.

ABOUT THE AUTHOR

...view details