ಕರ್ನಾಟಕ

karnataka

ETV Bharat / bharat

ನ್ಯಾಯಾಂಗ ನಿಂದನೆ ಪ್ರಕರಣ: ಒಂದು ರೂ. ದಂಡ ಪಾವತಿಸಿದ ಪ್ರಶಾಂತ್ ಭೂಷಣ್ - ಸುಪ್ರೀಂ ಕೋರ್ಟ್

ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ವಿಧಿಸಿದ್ದ ಒಂದು ರೂಪಾಯಿ ದಂಡ ಪಾವತಿಸಿರುವ ವಕೀಲ ಪ್ರಶಾಂತ್ ಭೂಷಣ್, ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.

Prashant Bhushan
ಒಂದು ರೂ. ದಂಡ ಪಾವತಿಸಿದ ಪ್ರಶಾಂತ್ ಭೂಷಣ್

By

Published : Sep 14, 2020, 1:54 PM IST

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ವಿಧಿಸಿದ್ದ ಒಂದು ರೂಪಾಯಿ ದಂಡವನ್ನು ವಕೀಲ ಪ್ರಶಾಂತ್ ಭೂಷಣ್ ಇಂದು ಪಾವತಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಭೂಷಣ್, ದಂಡ ಪಾವತಿಸಿದ್ದರಿಂದ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ತಿಳಿದುಕೊಳ್ಳಬಾರದು. ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ 2019ರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಮಾತನಾಡಿದ ಶಿಕ್ಷಣ ತಜ್ಞರ ಮೇಲೆ ಆರೋಪ ಹೊರಿಸಿರುವುದನ್ನು ಹಾಗೂ ಜೆಎನ್​ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವನ್ನು ಪ್ರಶಾಂತ್ ಭೂಷಣ್ ಖಂಡಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ವಿಚಾರಣೆಯಲ್ಲಿ ಭೂಷಣ್​ ದೋಷಿ ಎಂಬುದು ಸಾಬೀತಾಗಿತ್ತು. ತಮ್ಮ ತಪ್ಪಿಗೆ ಕ್ಷಮೆ ಕೇಳುವಂತೆ ನ್ಯಾಯಾಲಯ ಸೂಚಿಸಿ, ಕಾಲಾವಕಾಶ ನೀಡಿತ್ತು. ಆದರೆ ಕ್ಷಮೆಯಾಚನೆ ಮಾಡುವುದಕ್ಕೆ ಪ್ರಶಾಂತ್ ಭೂಷಣ್ ನಿರಾಕರಿಸಿದ್ದರು. ಹೀಗಾಗಿ ಒಂದು ರೂ. ದಂಡ ವಿಧಿಸಿ ಸುಪ್ರೀಂಕೋರ್ಟ್ ಆಗಸ್ಟ್​ 31ರಂದು ಮಹತ್ವದ​ ತೀರ್ಪು ನೀಡಿತ್ತು. ಸೆ. 15ರ ಒಳಗಡೆ ದಂಡ ಕಟ್ಟದಿದ್ದರೆ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡುವಂತಿಲ್ಲ ಹಾಗೂ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ಕೂಡ ಸೂಚಿಸಿತ್ತು.

ABOUT THE AUTHOR

...view details