ಕರ್ನಾಟಕ

karnataka

ETV Bharat / bharat

ಆಯುರ್ವೇದಿಕ್​ ವೈದ್ಯ ಈಗ ಗೋವಾ ಸಿಎಂ... ನಡುರಾತ್ರಿ ಪಟ್ಟಕ್ಕೇರಿದ ಸಾವಂತ್​ ಯಾರು? - ಗೋವಾ ಸಿಎಂ

ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ದಿಢೀರ್​ ಅವಕಾಶ ಒಲಿದುಬಂದು ಸಂಕ್ವಿಲಿನ್​ ಕ್ಷೇತ್ರದಿಂದ ಆಯ್ಕೆಯಾದರು. ಎಲ್ಲ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾವಂತ್​ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿತ್ತು.

ಪ್ರಮೋದ್​ ಸಾವಂತ್

By

Published : Mar 19, 2019, 10:49 AM IST

ಪಣಜಿ: ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರ ಅಂತ್ಯಕ್ರಿಯೆ ನೆರವೇರಿದ ದಿನ ತಡರಾತ್ರಿ 2 ಗಂಟೆಗೆ ಸಿಎಂ ಗಾದಿಗೇರಿದ ಪ್ರಮೋದ್​ ಸಾವಂತ್​ ಬಿಜೆಪಿ ವಯಲದಲ್ಲಿ ಮೃದು ಸ್ವಭಾವದ ವ್ಯಕ್ತಿ ಎಂದೇ ಗುರುತಿಸಿಕೊಂಡವರು.

ಗೋವಾ ನೂತನ ಸಿಎಂ ಪ್ರಮೋದ್​ ಸಾವಂತ್

ಸಂಕ್ವಿಲಿಂ ಕ್ಷೇತ್ರದಿಂದ ಆಯ್ಕೆಯಾದ ಸಾವಂತ್​ ಅವರು ಹುಟ್ಟಿದ್ದು ಏಪ್ರಿಲ್​ 24, 1973. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಬಾರಿ ಆಯ್ಕೆಯಾದ ಸಾವಂತ್​ ಮೂಲತಃ ಆಯುರ್ವೇದಿಕ್​ ವೈದ್ಯ. ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ದಿಢೀರ್​ ಅವಕಾಶ ಒಲಿದುಬಂದು ಸಂಕ್ವಿಲಿನ್​ ಕ್ಷೇತ್ರದಿಂದ ಆಯ್ಕೆಯಾದರು. ಎಲ್ಲ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾವಂತ್​ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿತ್ತು.

ವೃತ್ತಿಯಲ್ಲಿ ರಾಸಾಯನಿಕ ಶಾಸ್ತ್ರ ಶಿಕ್ಷಕಿಯಾಗಿರುವ ಅವರ ಪತ್ನಿ ಸುಲಕ್ಷಣ ಅವರು ಸದ್ಯ ಬಿಜೆಪಿ ಮಹಿಳಾ ಮೋರ್ಚದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details