ಕರ್ನಾಟಕ

karnataka

ETV Bharat / bharat

ಸಾಧ್ವಿ ಪ್ರಗ್ಯಾ ಸಿಂಗ್‌ ಸಂಸತ್‌ ಸದಸ್ಯೆಯಾಗಿ ಮೂರು ಬಾರಿ ಪ್ರಮಾಣ.. ಯಾಕೆ ಏನಾಯ್ತು ನೋಡಿ.. - ಪ್ರಮಾಣವಚನ

ಲೋಕಸಭಾ ಚುನಾವಣೆ ವೇಳೆ ಬಾಬ್ರಿ ಮಸೀದಿ ಹಾಗೂ ಪೊಲೀಸ್​ ಅಧಿಕಾರಿ ಹೇಮಂತ್​ ಕರ್ಕರೆ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್​, ಇದೀಗ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದ ವೇಳೆ ಕೂಡ ವಿವಾದಕ್ಕೊಳಗಾಗಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್​

By

Published : Jun 17, 2019, 9:33 PM IST

ನವದೆಹಲಿ: ಚುನಾವಣೆ ವೇಳೆ ವಿವಾದಿತ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್​, ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಪಡೆದುಕೊಂಡಿದ್ದಾರೆ.

ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದ ವೇಳೆ ಕೋಲಾಹಲ ಉಂಟಾಗಿದ್ದು, ಅವರು ತಮ್ಮ ಹೆಸರು ಹೇಳುತ್ತಿದ್ದಂತೆ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿ, ಗದ್ದಲ ಮಾಡಿತು.

ವಿವಾದಕ್ಕೊಳಗಾದ ಬಿಜೆಪಿ ಸಂಸದೆ

ನಡೆದಿದ್ದೇನು!

ಮಧ್ಯಪ್ರದೇಶದ ಭೋಪಾಲ್​ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಇವರು ತಮ್ಮ ಹೆಸರು ಸಾಧ್ವಿ ಪ್ರಗ್ಯಾ ಸಿಂಗ್ ಎಂದು ಹೇಳಿದ್ದರು. ಆದರೆ, ಇಂದು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾಗ ತಮ್ಮ ಹೆಸರು ಸ್ವಾಮಿ ಪೂರ್ಣಚೇತನಾನಂದ ಅವಧೇಶಾನಂದ ಗಿರಿ ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್​ ಆಕ್ಷೇಪ ವ್ಯಕ್ತಪಡಿಸಿತು. ಇದೇ ವೇಳೆ ಹಂಗಾಮಿ ಸ್ಪೀಕರ್​ ವೀರೇಂದ್ರ ಕುಮಾರ್​ ಕೂಡ ನಿಮ್ಮ ಹೆಸರು ಹೇಳುವಂತೆ ಸಲಹೆ ನೀಡಿದ್ದಾರೆ.

ಹೀಗಾಗಿ ಪ್ರಗ್ಯಾ ಠಾಕೂರ್​ ಸಿಂಗ್​ ಒಟ್ಟು ಮೂರು ಸಲ ಪ್ರಮಾಣ ವಚನ ಸ್ವೀಕಾರ ಮಾಡುವಂತಾಯಿತು.

ABOUT THE AUTHOR

...view details