ಕರ್ನಾಟಕ

karnataka

ETV Bharat / bharat

ಅನ್ನದಾತನ ಮಗನಿಗೊಲಿದ ಅಗ್ರಸ್ಥಾನ: ಯುಪಿಎಸ್‌ಸಿ ಸಾಧಕ ಪ್ರದೀಪ್‌ಗೆ ಜನಸೇವೆಯ ತುಡಿತ - ದೇಶಕ್ಕೆ ಟಾಪ್​

ಯುಪಿಎಸ್‌ಸಿ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಒಟ್ಟು 829 ಅಭ್ಯರ್ಥಿಗಳ ಪೈಕಿ 10ರ ಅಗ್ರ ಪಂಕ್ತಿಯಲ್ಲಿ ಮೂವರು ಮಹಿಳೆಯರಿದ್ದಾರೆ. ಮೊದಲ 25 ಸಾಧಕರಲ್ಲಿ 9 ಮಹಿಳಾ ಅಭ್ಯರ್ಥಿಗಳಿದ್ದಾರೆ. 182 ವಿದ್ಯಾರ್ಥಿಗಳ ಫಲಿತಾಂಶ ಕಾಯ್ದಿರಿಸಲಾಗಿದ್ದು, 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

Pradeep Singh
Pradeep Singh

By

Published : Aug 4, 2020, 7:05 PM IST

ನವದೆಹಲಿ: ಕಳೆದ ವರ್ಷವೇ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಪರೀಕ್ಷೆ ಪಾಸ್​ ಮಾಡಿ ಭಾರತೀಯ ಕಂದಾಯ ಇಲಾಖೆ(IRS) ಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್​​ ಸಿಂಗ್,​ 2019ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು ಇದೀಗ ದೇಶಕ್ಕೆ ಮೊದಲ ಸ್ಥಾನದ ವಿಶೇಷ ಸಾಧನೆ ಮಾಡಿದ್ದಾರೆ.

ಇದನ್ನೂ ಒದಿ: UPSC ಸಾಧಕರನ್ನು ಅಭಿನಂದಿಸಿ, ಆಯ್ಕೆ​ ಆಗದವರಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ

ರೈತನ ಮಗನಾಗಿರುವ ಪ್ರದೀಪ್​ ಸಿಂಗ್​ ಹುಟ್ಟಿ ಬೆಳೆದಿದ್ದು ಹರ್ಯಾಣದ ಸೋನಿಪತ್​​​ನಲ್ಲಿ. ಇವರ ತಂದೆ ರೈತ. ಸ್ಥಳೀಯ ಹೈಸ್ಕೂಲ್​​ನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಇವರು ಇಂಜಿನಿಯರಿಂಗ್​ ಪದವೀಧರನೂ ಹೌದು.

ತನ್ನ ಸಾಧನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾಗರಿಕ ಸೇವೆಯ ಮೂಲಕ ತಮ್ಮ ಕೈಯಿಂದಾದ ಜನಸೇವೆ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ABOUT THE AUTHOR

...view details