ಹೈದರಾಬಾದ್(ತೆಲಂಗಾಣ):ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದಕ್ಷಿಣ ಸೂಪರ್ ಸ್ಟಾರ್ ಪ್ರಭಾಸ್ ತಾನು ಸ್ವಯಂ-ನಿರ್ಬಂಧ (ಸೆಲ್ಫ್ ಕ್ವಾರಂಟೈನ್) ದಲ್ಲಿದ್ದೇನೆ ಎಂದು ಘೋಷಿಸಿದ್ದಾರೆ.
ಬಾಹುಬಲಿ ನಟ "ತಾನು ಇತ್ತೀಚೆಗೆ ಜಾರ್ಜಿಯಾದಿಂದ ಚಿತ್ರದ ಚಿತ್ರೀಕರಣ ಮುಗಿಸಿ ಹಿಂದಿರುಗಿದ್ದೇನೆ. ಕೋವಿಡ್-19 ರ ಅಪಾಯಗಳ ಬೆಳಕಿನಲ್ಲಿಯೇ ವಿದೇಶದಲ್ಲಿ ನನ್ನ ಚಿತ್ರೀಕರಣ ಮುಗಿಸಿ ಸುರಕ್ಷಿತವಾಗಿ ಮರಳಿರುವ ನಾನು ಸ್ವಯಂ-ನಿರ್ಬಂಧವನ್ನು ಹಾಕಿಕೊಳ್ಳಲು ನಿರ್ಧರಿಸಿದ್ದೇನೆ. ಹಾಗೆಯೇ ನೀವೆಲ್ಲರೂ ಸುರಕ್ಷಿತವಾಗಿರಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ" ಎಂದು ಶನಿವಾರ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.