ಸೆಹೋರ್(ಮಧ್ಯಪ್ರದೇಶ):ಗಂಡ-ಹೆಂಡತಿಯಂತೆ ಜೀವನ ನಡೆಸುವ ಸಲುವಾಗಿ ಇಬ್ಬರು ಯುವಕರು ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ತಮಗೆ ಮಕ್ಕಳಾಗಿಲ್ಲವೆಂದು ಸಹೋದರನ ಮಗನನ್ನ ದತ್ತು ಪಡೆದುಕೊಂಡಿದ್ದರು. ಆದರೆ ಇದೀಗ ಮರಣೋತ್ತರ ಪರೀಕ್ಷೆಯಿಂದ ಆಶ್ಚರ್ಯಕರ ಸಂಗತಿವೊಂದು ಬಹಿರಂಗಗೊಂಡಿದೆ.
ಮಧ್ಯಪ್ರದೇಶದ ಸೆಹೋರ್ನಲ್ಲಿ ಈ ಘಟನೆ ನಡೆದಿದೆ. ಎಂಟು ವರ್ಷಗಳ ಕಾಲ ಜೀವನ ನಡೆಸಿದ ಇವರಿಬ್ಬರ ನಡುವೆ ಕಳೆದ ತಿಂಗಳು ಭಿನ್ನಾಭಿಪ್ರಾಯ ಉಂಟಾಗಿದೆ. ಈ ವೇಳೆ ಹೆಂಡತಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಆಕೆಯ ರಕ್ಷಣೆ ಮಾಡಲು ಗಂಡ ಓಡಿ ಹೋಗಿದ್ದಾನೆ. ಹೀಗಾಗಿ ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇವರ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳೆ ವರದಿಯಲ್ಲಿ ಆಕೆ ಮಹಿಳೆ ಅಲ್ಲ ಬದಲಿಗೆ ಪುರುಷ ಎಂಬ ಮಾಹಿತಿ ತಿಳಿದು ಬಂದಿದೆ.