ನವದೆಹಲಿ: ಪಿಂಚಣಿದಾರರು ತಮ್ಮ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಈಗ ಮತ್ತಷ್ಟು ಸುಲಭವಾಗಿದೆ. ಕೇಂದ್ರ ಸರ್ಕಾರ ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆ ಒದಗಿಸಲಿದ್ದು, ಪೋಸ್ಟ್ಮ್ಯಾನ್ ಮೂಲಕ ಮನೆಯಲ್ಲೇ ಕುಳಿತು ತಮ್ಮ ಜಿವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ.
ಪಿಂಚಣಿದಾರರಿಗೆ ಸಹಾಯ; ಮನೆ ಬಾಗಿಲಿಗೇ ಪೋಸ್ಟ್ ಆಫೀಸ್! - ಪಿಂಚಣಿದಾರ
ಕೇಂದ್ರ ಸರ್ಕಾರ ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆ ಒದಗಿಸಲಿದ್ದು, ಪೋಸ್ಟ್ಮ್ಯಾನ್ ಮೂಲಕ ಮನೆಯಲ್ಲೇ ಕುಳಿತು ತಮ್ಮ ಜಿವನ ಪ್ರಮಾಣಪತ್ರ ಸಲ್ಲಿಸ ಬಹುದಾಗಿದೆ.

ಈ ಸೇವೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಸೌಲಭ್ಯ ಎಲ್ಲ ಪಿಂಚಣಿದಾರನಿಗೂ ಲಭ್ಯವಿದೆ. ಪ್ರಸ್ತುತ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆ, ಪಿಂಚಣಿದಾರರು ಮನೆಯಲ್ಲೇ ಕುಳಿತು ತಮ್ಮ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಒಂದು ಉತ್ತಮ ವಿಷಯವಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಜೀವಪ್ರಮಾನ್ ಪೋರ್ಟಲ್ ಮೂಲಕ ಜೀವನ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014 ರ ನವೆಂಬರ್‌ನಲ್ಲಿ ಪ್ರಾರಂಭಿಸಿದ್ದರು. ಪಿಂಚಣಿದಾರರಿಗೆ ವ್ಯವಸ್ಥೆಯನ್ನು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸಲು ಪಿಂಚಣಿದಾರರು ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನದ ಲಾಭವನ್ನು ಪಡೆಯುತ್ತಿದೆ.