ನವದೆಹಲಿ: ಕೊರೊನಾ ರೋಗಿಗಳ ಮನೆ ಎದುರು ಪೋಸ್ಟರ್ ಅಂಟಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಬಂಧಿಸಿದ ಪ್ರಾಧಿಕಾರದಿಂದ ನಿರ್ದೇಶನವಿಲ್ಲದಿದ್ದರೆ ರಾಜ್ಯ ಸರ್ಕಾರದ ಅಧಿಕಾರಿಗಳು ಕೊರೊನಾ ರೋಗಿಗಳ ಮನೆಗಳ ಹೊರಗೆ ಪೋಸ್ಟರ್‌ಗಳನ್ನು ಅಂಟಿಸುವುದು, ಅವರ ಗುರುತುಗಳನ್ನು ಬಹಿರಂಗಪಡಿಸುವುದು ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಓದಿ: ‘ಫೆಬ್ರವರಿ ವೇಳೆಗೆ ಕೊವಾಕ್ಸಿನ್ ಸಾರ್ವಜನಿಕ ಬಳಕೆಗೆ ಲಭ್ಯ ಸಾಧ್ಯತೆ’
ನಿರ್ದಿಷ್ಟ ಪ್ರಕರಣಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರ ಮಾತ್ರ ಸೂಚನಾ ಫಲಕ ಅಥವಾ ಪೋಸ್ಟರ್ ಅಂಟಿಸಬಹುದು. ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಗಳು ಪಾಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ, ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.