ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ಮಾಡದೇ ಇದ್ದಿದ್ದರೆ ಸೋಂಕಿತರ ಸಂಖ್ಯೆ 8,20,000ಕ್ಕೇರುತ್ತಿತ್ತು! - India corona updates

130 ಕೋಟಿ ಭಾರತೀಯರನ್ನು ಮನೆಯೊಳಗೆ ಇರುವಂತೆ ಆದೇಶಿಸಿದ ಲಾಕ್​ಡೌನ್​ ನಿರ್ಧಾರವು ದೇಶದಲ್ಲಿ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯ ಮಾಡಿದೆ. ಒಂದು ವೇಳೆ ದೇಶದಲ್ಲಿ ಲಾಕ್​ಡೌನ್​ ಇಲ್ಲದಿದ್ದರೆ, ಏಪ್ರಿಲ್ ತಿಂಗಳ ಮಧ್ಯದ ವೇಳೆಗೆ ದೇಶದ ಕೊರೊನಾ ಪ್ರಕರಣಗಳ ಸಂಖ್ಯೆ 8,20,000ಕ್ಕೆ ತಲುಪುತ್ತಿತ್ತು. ಅಲ್ಲದೆ ದೇಶದಲ್ಲಿ ಲಾಕ್​ಡೌನ್​ ಹೇರದೇ ಇರುತ್ತಿದ್ದರೆ, ನಾವು ಇಟಲಿಯ ಮಾರ್ಗದಲ್ಲೇ ಹೋಗುತ್ತಿದ್ದೆವು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಹೇಳಿದ್ದಾರೆ.

India corona updates
ಭಾರತ ಕೊರನಾ ಸುದ್ದಿ

By

Published : Apr 10, 2020, 11:55 AM IST

ನವದೆಹಲಿ: ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ಆರಂಭಿಕ ಯಶಸ್ಸು ಸಾಧಿಸಿದೆ. ಒಂದು ವೇಳೆ ದೇಶದಲ್ಲಿ ಲಾಕ್‌ಡೌನ್ ವಿಧಿಸದೇ ಇದ್ದಿದ್ದರೆ, ಮುಂದಿನ ವಾರದ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಸುಮಾರು 8,20,000 ಕ್ಕೂ ಹೆಚ್ಚಾಗುತ್ತಿತ್ತು ಎಂದು ಸರ್ಕಾರದ ಮೂಲಗಳು ಹೇಳಿದೆ.

ಸದ್ಯ ದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 6412 ರಷ್ಟಿದ್ದು, 199 ಮಂದಿ ಸವನ್ನಪ್ಪಿದ್ದಾರೆ. ವಿಶ್ವದ ಪ್ರಬಲ ರಾಷ್ಟ್ರಗಳಾದ ಅಮೆರಿಕ, ಇಟಲಿ ಹಾಗೂ ಸ್ಪೇನ್‌ನಂತಹ ಇತರ ದೇಶಗಳಿಗಿಂತ ಇದು ತುಂಬಾ ಕಡಿಮೆ.

130 ಕೋಟಿ ಭಾರತೀಯರನ್ನು ಮನೆಯೊಳಗೆ ಇರುವಂತೆ ಆದೇಶಿಸಿದ ಪ್ರಧಾನಿ ನರೇಂದ್ರ ಮೋದಿಯವರ ಮೂರು ವಾರಗಳ ಲಾಕ್​ಡೌನ್​ ನಿರ್ಧಾರವು ದೇಶದಲ್ಲಿ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಇದು ದೇಶದ ಲಕ್ಷಾಂತರ ಬಡವರು ಹಾಗೂ ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ.

ಒಂದು ವೇಳೆ ದೇಶದಲ್ಲಿ ಲಾಕ್​ಡೌನ್​ ಇಲ್ಲದಿದ್ದರೆ, ಏಪ್ರಿಲ್ ತಿಂಗಳ ಮಧ್ಯದ ವೇಳೆಗೆ ದೇಶದ ಕೊರೊನಾ ಪ್ರಕರಣಗಳ ಸಂಖ್ಯೆ 8,20,000ಕ್ಕೆ ತಲುಪುತ್ತಿತ್ತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಮೌಲ್ಯಮಾಪನವನ್ನು ಉಲ್ಲೇಖಿಸಿ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಲಾಕ್​ಡೌನ್​ ಹೇರದೇ ಇರುತ್ತಿದ್ದರೆ, ನಾವು ಇಟಲಿಯ ಮಾರ್ಗದಲ್ಲೇ ಹೋಗುತ್ತಿದ್ದೆವು ಎಂದು ಎಂದು ಸ್ವರೂಪ್ ಸುದ್ದಿಗಾರರಿಗೆ ತಿಳಿಸಿದರು.

ಭಾರತದಲ್ಲಿ ಮೊದಲ ಪಾಸಿಟಿವ್​ ಪ್ರಕರಣ ಜನವರಿ 30ರಂದು ಪತ್ತೆಯಾಗಿತ್ತು. ಇದಕ್ಕಿಂತ ಹದಿನೈದು ದಿನಗಳ ಮೊದಲೇ ಭಾರತದಲ್ಲಿ ವಿದೇಶದಿಂದ ದೇಶಕ್ಕೆ ಮರಳುವ ಜನರನ್ನು ಸ್ಕ್ರೀನಿಂಗ್​ ಮಾಡಲು ಪ್ರಾರಂಭ ಮಾಡಲಾಗಿತ್ತು. ಆದರೆ ಇಟಲಿ, ಮೊದಲ ಪ್ರಕರಣ ಪತ್ತೆಯಾದ 25 ದಿನಗಳ ನಂತರ ಸ್ಕ್ರೀನಿಂಗ್​ ಆರಂಭಿಸಿತ್ತು. ಇಂತಹ ನಿರ್ಧಾರದಿಂದ ಇಟಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಭಾರತದಲ್ಲಿ ಪ್ರಕರಣ ಹತೋಟಿಗೆ ಬಂದಿದೆ.

ABOUT THE AUTHOR

...view details