ಪಣಜಿ(ಗೋವಾ): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕಾಗಿ ಭಾರತದ ಪ್ರಯತ್ನವನ್ನು ತಮ್ಮ ದೇಶವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿಸೋಜಾ ಹೇಳಿದ್ದಾರೆ.
ಎರಡು ದಿನಗಳ ಗೋವಾ ಪ್ರವಾಸದಲ್ಲಿರುವ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯರಾಗಲು ಭಾರತಕ್ಕೆ ಪೋರ್ಚುಗಲ್‌ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಜೂನ್ 2-6ರ ನಡುವೆ ನಡೆಯಲಿರುವ 2020 ರ ಸಂಸ್ಥೆಯ ಸಾಗರ ಸಮ್ಮೇಳನದಲ್ಲಿ ಭಾರತ ಭಾಗವಹಿಸಲಿದೆ ಎಂದು ಡಿಸೋಜಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರೊಂದಿಗಿನ ಭೇಟಿಯು ಫಲಪ್ರದವಾಗಿತ್ತು. ದ್ವಿಪಕ್ಷೀಯವಾಗಿ ಉತ್ತಮ ಮಾತುಕತೆ ನಡೆಯಿತು. ಭಾರತದಲ್ಲಿ ಪೋರ್ಚುಗೀಸ್ ಹೂಡಿಕೆ ಮತ್ತು ಪೋರ್ಚುಗಲ್ನಲ್ಲಿನ ಭಾರತದ ಹೂಡಿಕೆಗಾಗಿ ಕೆಲ ಯೋಜನೆಗಳನ್ನು ಚರ್ಚಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಆರ್ಥಿಕತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಉಭಯ ದೇಶಗಳು ಯೋಜಿಸಿವೆ ಎಂದು ಪೋರ್ಚುಗೀಸ್ ಅಧ್ಯಕ್ಷ ಹೇಳಿದರು.