ಚಮೋಲಿ (ಉತ್ತರಾಖಂಡ): ಜಗಮಗಿಸುವ ವಿದ್ಯುತ್ ದೀಪ ಮತ್ತು ಹೂವುಗಳಿಂದ ಅಂಲಂಕೃತಗೊಂಡ ಶ್ರೀ ಬದರಿನಾಥ ದೇವಾಲಯವನ್ನು ಮುಂಜಾನೆ 4:30ಕ್ಕೆ ಪುನಃ ತೆರೆಯಲಾಯಿತು. ಈ ವೇಳೆ ಪ್ರಧಾನ ಅರ್ಚಕರು ಸೇರಿದಂತೆ 28 ಜನರು ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಬದರಿನಾಥ ದೇವಸ್ಥಾನದ ಅರ್ಚಕರಿಗೆ ಪ್ರಾರ್ಥನೆಯ ವಿನಂತಿ ಕಳುಹಿಸಿದ್ದು, ದೇಗುಲ ಆರಂಭವಾದ ನಂತರ ತಮಗೆ ದೊರೆತಿರುವ ಮೊದಲ ಪ್ರಾರ್ಥನೆ ವಿನಂತಿ ಇದು ಎಂದು' ಎಂದು ಪ್ರಧಾನ ಅರ್ಚಕ ಭುವನ್ ಚಂದ್ರ ಯುನಿಯಾಲ್ ಹೇಳಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ದೇವಾಲಯ ಪುನಾರಂಭದ ವೇಳೆ ಹಾಜರಿದ್ದವರನ್ನು ಅಭಿನಂದಿಸಿದ್ದಾರೆ. ಕೊರೊನಾ ಸೋಂಕನ್ನು ಸೋಲಿಸಿ, ಆದಷ್ಟು ಬೇಗ ಚಾರ್ಧಾಮ್ ಯಾತ್ರೆ ಪ್ರಾರಂಭವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಹಿಂದೆ ಏಪ್ರಿಲ್ 29 ರಂದು ಆರು ತಿಂಗಳ ಚಳಿಗಾಲದ ವಿರಾಮದ ನಂತರ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗಿದೆ. ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.