ನವದೆಹಲಿ:ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳು ಅದರಿಂದ ಹೊರಬರಬೇಕಾದ್ರೆ ಅವರಲ್ಲಿರುವ ಮನೋಬಲ ವೃದ್ಧಿಸುವ ಅವಶ್ಯಕತೆಯಿದ್ದು, ಆ ನಿಟ್ಟಿನಲ್ಲಿ ನಾವು ಮೊದಲು ಕೆಲಸ ಮಾಡುತ್ತೇವೆ ಎಂದು ದೆಹಲಿ ಏಮ್ಸ್ನಲ್ಲಿ ಕೆಲಸ ಮಾಡುವ ನರ್ಸ್ ಮಾಹಿತಿ ಹಂಚಿಕೊಂಡರು.
ಕೊರೊನಾ ವೈರಸ್ಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳಲು ಇಲ್ಲಿಗೆ ಬರುವ ರೋಗಿಗಳಿಗೆ ನಾವು ಮೊದಲು ಮನೋಬಲ ವೃದ್ಧಿಸುವ ಕೆಲಸ ಮಾಡುವ ಜತೆಗೆ ನಿಮ್ಮೊಂದಿಗೆ ನಾವಿದ್ದೇವೆ ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬುತ್ತೇವೆ ಎಂದು ಏಮ್ಸ್ನಲ್ಲಿ ಕೆಲಸ ಮಾಡು ನರ್ಸ್ ಪೂಜಾ ಸೇಥಿ ತಿಳಿಸಿದ್ದಾರೆ.
ದೆಹಲಿ ಏಮ್ಸ್ ಆಸ್ಪತ್ರೆ ನರ್ಸ್ ಮಾಹಿತಿ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ಅವರಿಗೆ ಮಾನಸಿಕ ಬೆಂಬಲ ತುಂಬಾ ಅಗತ್ಯವಾಗಿರುತ್ತದೆ. ಒಂದು ವೇಳೆ ಅವರಲ್ಲಿರುವ ಆತ್ಮವಿಶ್ವಾಸ ಕಡಿಮೆಯಾದರೆ ಚಿಕಿತ್ಸೆ ಸ್ಪಂದಿಸುವ ಸಾಧ್ಯತೆ ಕಡಿಮೆ ಇರುತ್ತದೆ ಹೀಗಾಗಿ ಅವರನ್ನ ಈ ವಿಶ್ವಾಸ ತುಂಬುವ ಕೆಲಸ ನಾವು ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ, ಅವರು ಮನೆಗೆ ಹೋಗದಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಏಮ್ಸ್ನಲ್ಲಿ ಉಳಿದುಕೊಂಡಿದ್ದಾಗಿ ತಿಳಿಸಿದ್ದಾರೆ. ಮನೆಯಲ್ಲಿ ಅಸ್ತಮಾ ರೋಗದಿಂದ ಬಳಲುತ್ತಿರುವ ತಂದೆ ಇದ್ದಾರೆ. ಒಂದು ವೇಳೆ ನಾವು ಮನೆಗೆ ಹೋದರೆ ಸೋಂಕು ಅವರಿಗೂ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿ ಏಮ್ಸ್ನಲ್ಲೇ ಉಳಿದುಕೊಂಡಿದ್ದಾಗಿ ತಿಳಿಸಿದ್ದಾರೆ.