ಕರ್ನಾಟಕ

karnataka

ಮಾಲಿನ್ಯ ಸಮಸ್ಯೆ ಒಂದು ದಿನದಲ್ಲಿ ಪರಿಹರಿಸಲಾಗುವುದಿಲ್ಲ, ನಿರಂತರ ಪ್ರಯತ್ನ ಬೇಕು: ಜಾವಡೇಕರ್

ಇ-ವಾಹನಗಳು ಜನಪ್ರಿಯವಾಗುತ್ತಿವೆ ಮತ್ತು ಪ್ರಸ್ತುತ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಇ-ವಾಹನಗಳನ್ನು ಬಳಸಲಾಗುತ್ತಿದೆ. ನಾನು ಕೂಡ ಇ-ವಾಹನವನ್ನು ಬಳಸುತ್ತೇನೆ. ನನ್ನ ಮನೆಯಲ್ಲೇ ಅದನ್ನು ಚಾರ್ಜ್ ಮಾಡುತ್ತೇನೆ. ನಾನು ಇ-ಸ್ಕೂಟಿಯನ್ನು ಕೂಡ ಓಡಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ತಿಳಿಸಿದರು.

By

Published : Oct 18, 2020, 10:15 PM IST

Published : Oct 18, 2020, 10:15 PM IST

Central Minister Prakash Javadekar Facebook live
ವಾಯು ಮಾಲಿನ್ಯದ ಬಗ್ಗೆ ಸಚಿವ ಪ್ರಕಾಶ್​ ಜಾವಡೇಕರ್​ ಮಾತು

ನವದೆಹಲಿ : ಮಾಲಿನ್ಯ ಸಮಸ್ಯೆಯನ್ನು ಒಂದು ದಿನದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣವಾಗುವ ಪ್ರತಿಯೊಂದು ಅಂಶಗಳನ್ನು ನಿಭಾಯಿಸಲು ನಿರಂತರ ಪ್ರಯತ್ನಗಳು ಅಗತ್ಯವಾಗಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಫೇಸ್‌ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೈಗಾರಿಕೆಗಳು, ತ್ಯಾಜ್ಯ, ಧೂಳು, ಭೌಗೋಳಿಕ ಮತ್ತು ಹವಾಮಾನಶಾಸ್ತ್ರ ಸೇರಿದಂತೆ ವಾಯುಮಾಲಿನ್ಯಕ್ಕೆ ಹಲವು ಕಾರಣಗಳಿವೆ. ಹೀಗಾಗಿ, ಮಾಲಿನ್ಯ ಸಮಸ್ಯೆಯನ್ನು ಒಂದು ದಿನದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ನಿರಂತರ ಪ್ರಯತ್ನ ಬೇಕು ಎಂದರು.

ಇ-ವಾಹನಗಳು ಜನಪ್ರಿಯವಾಗುತ್ತಿವೆ ಮತ್ತು ಪ್ರಸ್ತುತ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಇ-ವಾಹನಗಳನ್ನು ಬಳಸಲಾಗುತ್ತಿದೆ. ನಾನು ಕೂಡ ಇ-ವಾಹನವನ್ನು ಬಳಸುತ್ತೇನೆ. ನನ್ನ ಮನೆಯಲ್ಲೇ ಅದನ್ನು ಚಾರ್ಜ್ ಮಾಡುತ್ತೇನೆ. ನಾನು ಇ-ಸ್ಕೂಟಿಯನ್ನು ಕೂಡ ಓಡಿಸುತ್ತೇನೆ ಎಂದು ಜಾವಡೇಕರ್​ ತಿಳಿಸಿದರು.

ಸರ್ಕಾರ ಬಿಎಸ್​ 4 ವಾಹನಗಳನ್ನು ಪರಿಚಯಿಸಿದೆ. ಇದು ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಶೇ .60 ರಷ್ಟು ಕಡಿಮೆ ಮಾಡುತ್ತದೆ. ವಾಹನಗಳಿಂದ ಉಂಟಾಗುವ ಮಾಲಿನ್ಯ ಕಡಿಮೆ ಮಾಡಲು ಮೆಟ್ರೋ ಮತ್ತು ಇ-ಬಸ್‌ಗಳನ್ನು ಪರಿಚಯಿಸಲಾಗಿದೆ. ಬ್ಯಾಡ್​ ಏರ್​ ದಿನಗಳು 2016 ರಲ್ಲಿ 250 ಇತ್ತು 2019 ರಲ್ಲಿ ಅದು 180 ಇಳಿದಿದೆ ಎಂದರು.

ವಾಯುಮಾಲಿನ್ಯ ನಿಭಾಯಿಸುವಲ್ಲಿ ಜನರ ಪಾತ್ರವೂ ದೊಡ್ಡದಿದೆ. ವಿವಿಧ ನಗರಗಳ ಮಾಲಿನ್ಯ ಮಟ್ಟ ಅರಿಯಲು ಸಹಾಯಕವಾಗುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣದ ಮಂಡಳಿ ಪರಿಚಯಿಸಿದ 'ಸಮೀರ್' ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಅವರು ಮನವಿ ಮಾಡಿದರು.

For All Latest Updates

TAGGED:

ABOUT THE AUTHOR

...view details