ಕರ್ನಾಟಕ

karnataka

ETV Bharat / bharat

ಜಾರ್ಖಂಡ್​​​ ವಿಧಾನಸಭಾ ಚುನಾವಣೆ: ನಾಲ್ಕನೇ ಹಂತದಲ್ಲಿ ಶೇ. 62.46 ರಷ್ಟು ವೋಟಿಂಗ್​​ - ಜಾರ್ಖಂಡ್​​​​ ವಿಧಾನಸಭಾ ಚುನಾವಣೆ 2019

ಜಾರ್ಖಂಡ್​ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಮುಂಜಾನೆಯಿಂದಲೇ ನಡೆದ ಬಿರುಸಿನ ಮತದಾನದಲ್ಲಿ ಶೇ. 62.46ರಷ್ಟು ವೋಟಿಂಗ್​​ ಆಗಿದೆ. ಒಟ್ಟು 15 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, 221 ಅಭ್ಯರ್ಥಿಗಳ ಹಣೆಬರಹ ಇದೀಗ ಭದ್ರವಾಗಿದೆ.

ಜಾರ್ಖಂಡ್​​​​ ವಿಧಾನಸಭಾ ಚುನಾವಣೆ: ನಾಲ್ಕನೇ ಹಂತದ ಮತದಾನ ಆರಂಭ, Polling for fourth phase of Jharkhand Assembly Polls begin
ಜಾರ್ಖಂಡ್​​​​ ವಿಧಾನಸಭಾ ಚುನಾವಣೆ: ನಾಲ್ಕನೇ ಹಂತದ ಮತದಾನ ಆರಂಭ

By

Published : Dec 16, 2019, 8:27 AM IST

Updated : Dec 16, 2019, 7:47 PM IST

ರಾಂಚಿ:ಜಾರ್ಖಂಡ್​ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಬೆಳಗ್ಗೆಯಿಂದಲೇ ಆರಂಭಗೊಂಡಿದ್ದ ವೋಟಿಂಗ್​ ಸಂಜೆ 5ಗಂಟೆಗೆ ಮುಕ್ತಾಯಗೊಂಡಿದೆ.

ಒಟ್ಟು 81 ಕ್ಷೇತ್ರಗಳಲ್ಲಿ ಇಂದು 15 ಕ್ಷೇತ್ರಗಳಿಗೆ ಮತದಾನ ನಡೆದಿದೆ. 15 ಕ್ಷೇತ್ರಗಳಲ್ಲಿ 22 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯ ಲಿಂಗಿ ಸೇರಿ ಒಟ್ಟು 221 ಅಭ್ಯರ್ಥಿಗಳು ಕಣದಲ್ಲಿದ್ದರು.

ಜಾರ್ಖಂಡ್​​​​ ವಿಧಾನಸಭಾ ಚುನಾವಣೆ: ನಾಲ್ಕನೇ ಹಂತದ ಮತದಾನ ಆರಂಭ

ಒಟ್ಟು 5 ಹಂತಗಳಲ್ಲಿ 81 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಡಿಸೆಂಬರ್ 20ರಂದು 5ನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್​ 23ರಂದು ಮತ ಎಣಿಕೆ ನಡೆಯಲಿದೆ.

Last Updated : Dec 16, 2019, 7:47 PM IST

ABOUT THE AUTHOR

...view details