ಕೊಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆ ದೇಶ ಬಿಡುವಂತೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ)ಯು ಜಾಧವ್ಪುರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೋಲೆಂಡ್‌ನ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿದೆ.
ವಿದ್ಯಾಭ್ಯಾಸಕ್ಕೆ ಕಂಟಕ ತಂದ ಸಿಎಎ ಪ್ರತಿಭಟನೆ: ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೆ ನೋಟಿಸ್ - ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ
ಪಶ್ಚಿಮ ಬಂಗಾಳದಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆ ದೇಶ ಬಿಡುವಂತೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ)ಯು ಜಾಧವ್ಪುರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೋಲೆಂಡಿನ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ.
ಕಾಮಿಲ್ ಸೀಡ್ಸಿನ್ಸ್ಕಿ, ತುಲನಾತ್ಮಕ ಸಾಹಿತ್ಯ ವ್ಯಾಸಂಗ ಮಾಡುತ್ತಿರುವ ಪೋಲೆಂಡ್ ವಿದ್ಯಾರ್ಥಿ. ಎಫ್‌ಆರ್‌ಆರ್‌ಒ ನಿರ್ದೇಶನದಂತೆ ಕಾಮಿಲ್ ಫೆಬ್ರವರಿ 22 ರಂದು ಕೋಲ್ಕತ್ತಾ ಎಫ್‌ಆರ್‌ಆರ್‌ಒ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ "ವಿದ್ಯಾರ್ಥಿ ವೀಸಾದ ಮೇಲೆ ಭಾರತದಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಯ ವರ್ತನೆ ಸರಿಯಿಲ್ಲ. ಹೀಗಾಗಿ ಎಫ್‌ಆರ್‌ಆರ್‌ಒ ನೋಟಿಸ್ ಸ್ವೀಕರಿಸಿದ 15 ದಿನಗಳೊಳಗೆ ದೇಶ ತೊರೆಯಬೇಕು" ಎಂದು ಸಿಡ್ಸಿನ್ಸ್ಕಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಂಗ್ಲಾದೇಶದ ವಿದ್ಯಾರ್ಥಿನಿ ಅಫ್ಸರಾ ಅನಿಕ ಮೀಮ್ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅದರ ಸಂಬಂಧ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆಕೆಗೂ ಎಫ್‌ಆರ್‌ಆರ್‌ಒ ಮೂಲಕ ಇದೇ ರೀತಿಯ ನಿರ್ದೇಶನ ಜಾರಿಯಾಗಿತ್ತು. ಸದ್ಯ ಪೋಲೆಂಡ್‌ನ ವಿದ್ಯಾರ್ಥಿಗೆ ಹದಿನೈದು ದಿನಗಳೊಳಗೆ ದೇಶ ಬಿಡುವಂತೆ ನಿರ್ದೇಶಿಸಿದೆ.