ಕರ್ನಾಟಕ

karnataka

ETV Bharat / bharat

ಭಾರಿ ಮಳೆಗೆ ನಡುಗಡ್ಡೆಯಾದ ಗ್ರಾಮ: ಚಿಕಿತ್ಸೆಗಾಗಿ ತುಂಬುಗರ್ಭಿಣಿ ಪರದಾಟ - ತೆಲಂಗಾಣ ಮಳೆ ಸುದ್ದಿ

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ನೆರವಿಗೆ ಬಂದ ಪೊಲೀಸರು, ಆಕೆಯನ್ನು ಟ್ರ್ಯಾಕ್ಟರ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿರುವ ಘಟನೆ ತೆಲಂಗಾಣದ ಕೋಟಪಲ್ಲಿ ಮಂಡಳದಲ್ಲಿ ನಡೆದಿದೆ.

Rain
ಮಳೆ

By

Published : Aug 17, 2020, 7:18 AM IST

ಕೋಟಪಲ್ಲಿ ಮಂಡಳ(ತೆಲಂಗಾಣ): ಭಾರಿ ಮಳೆ ಹಿನ್ನೆಲೆಯಲ್ಲಿ ತೆಲಂಗಾಣದ ಕೆಲ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವರುಣನ ಅಬ್ಬರ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು

ಕೋಟಪಲ್ಲಿಯಲ್ಲಿ ಹಳ್ಳ ತುಂಬಿ ಹರಿದಿದ್ದರಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳು ಬಂದ್ ಆಗಿದ್ದವು. ಇದೇ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅಲ್ಲಿನ ಪೊಲೀಸರು ತಕ್ಷಣ ಗರ್ಭಿಣಿ ನೆರವಿಗೆ ಧಾವಿಸಿದ್ದಾರೆ. ಮಹಿಳೆಯನ್ನ ಟ್ರ್ಯಾಕ್ಟರ್​ನಲ್ಲಿ ಚೆನ್ನೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ದೃಶ್ಯಗಳು ಈಗ ವೈರಲ್​ ಆಗಿವೆ.

ABOUT THE AUTHOR

...view details