ಕರ್ನಾಟಕ

karnataka

ETV Bharat / bharat

ವಿಡಿಯೋ ಕಾಲ್‌ನಲ್ಲಿ​ ಕ್ವಾರಂಟೈನ್​ನಲ್ಲಿರುವವರ ಆತ್ಮಸ್ಥೈರ್ಯ ಹೆಚ್ಚಿಸಿದ ಕೇರಳ ಪೊಲೀಸರು.. - ವಿಡಿಯೋ ಕಾಲ್

ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇರಳ ಪೊಲೀಸರ ನಡೆಯೊಂದು ಸಾಕಷ್ಟು ಮೆಚ್ಚುಗೆಯನ್ನ ಪಡೆದಿದೆ.

Kerala police makes video call

By

Published : Apr 3, 2020, 1:09 PM IST

ತ್ರಿಶೂರ್: 'ಜನರೊಂದಿಗೆ ಪೊಲೀಸರು' (Police with the people) ಅಭಿಯಾನದಡಿ ಕೇರಳ ಪೊಲೀಸರು ಕ್ವಾರಂಟೈನ್​ನಲ್ಲಿರುವವರಿಗೆ ವಿಡಿಯೋ ಕಾಲ್​ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ಮೂಲಕ ಅವರಿಗೆ ಮನೋಸ್ಥೈರ್ಯ ತುಂಬಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತ್ರಿಶೂರ್​ ರೇಂಜ್ ಡಿಐಜಿ ಎಸ್‌ ಸುರೇಂದ್ರನ್​ ಅವರು, ಮನೆಯಲ್ಲಿ ಕ್ವಾರಂಟೈನ್​ನಲ್ಲಿರುವವರಿಗೆ ವಿಡಿಯೋ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಕೊರೊನಾ ವೈರಸ್​ ಹೋಗಲಾಡಿಸುವ ಪ್ರಯತ್ನದಲ್ಲಿ ಜನರ ಸಹಭಾಗಿತ್ವವವನ್ನೂ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. 'ಕ್ವಾರಂಟೈನ್​ನಲ್ಲಿರುವವರು ತಮ್ಮ ಕುಟುಂಬ ಸದಸ್ಯರೊಂದಿಗೂ ಮಾತನಾಡುವಂತಿಲ್ಲ. ಇದರಿಂದಾಗಿ ಅವರ ಮನೋಸ್ಥೈರ್ಯ ಕುಸಿಯುವ ಸಾಧ್ಯತೆಗಳಿರುತ್ತವೆ.

ಹೀಗಾಗಿ ಅವರ ಒತ್ತಡ ಹಾಗೂ ಉದ್ವೇಗಗಳನ್ನು ನಿವಾರಿಸಿ, ಅವರಲ್ಲಿ ಧೈರ್ಯ ತುಂಬಲು ಕೇರಳ ಪೊಲೀಸರು ವಿಡಿಯೋ ಕಾಲ್​ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ.' ಎಂದು ಡಿಐಜಿ ಸುರೇಂದ್ರನ್ ತಿಳಿಸಿದರು. ಜನಸ್ನೇಹಿ ಪೊಲೀಸ್​ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೇರಳ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details