ಕರ್ನಾಟಕ

karnataka

ETV Bharat / bharat

ಹೆಲ್ಮೆಟ್​ ಇಲ್ಲದ ಸೈಕಲ್ ಸವಾರನಿಗೆ 2 ಸಾವಿರ ರೂ. ದಂಡ ಹಾಕಿದ ಪೊಲೀಸ್!​

ನೂತನ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಯಾದ ಬಳಿಕ ದೇಶಾದ್ಯಂತ ವಿಚಿತ್ರ ಘಟನೆಗಳು ವರದಿಯಾಗುತ್ತಿವೆ. ಕೆಲವರು ಹೆಲ್ಮೆಟ್​ಗೆ ಎಲ್ಲ ದಾಖಲಾತಿ ಅಂಟಿಸಿಕೊಂಡೇ ಸವಾರಿ ಮಾಡುತ್ತಿದ್ರೆ, ಮತ್ತೆ ಕೆಲವರು ದಂಡಭಯದಿಂದ ತಪ್ಪಿಸಿಕೊಳ್ಳಲು ಬೈಕ್​ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಆದರೆ, ಧರ್ಮಪುರಿಯಲ್ಲಿ ನಡೆದ ಘಟನೆ ಇನ್ನೂ ವಿಶೇಷ!

By

Published : Sep 17, 2019, 9:18 PM IST

ಸೈಕಲ್ ಸವಾರ

ಚೆನ್ನೈ:ಹೆಲ್ಮೆಟ್​ ಇಲ್ಲದ ಸೈಕಲ್ ಸವಾರನಿಗೆ ಸಂಚಾರಿ ಪೊಲೀಸರು ದಂಡ ಹಾಕಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಧರ್ಮಪುರಿ ಜಿಲ್ಲೆಯ ಏರಿಯೂರ್​ ಭಾಗದ ಸಂಚಾರಿ ಪೊಲೀಸರು ವಾಹನ ತಪಾಸಣೆಗೆ ರಸ್ತೆಗಿಳಿದಿದ್ದರು. ಈ ವೇಳೆ ಸೈಕಲ್​ನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಸೈಕಲ್ ಸವಾರನಿಗೂ ದಂಡ ಹಾಕಿದ ಚೆನ್ನೈ ಟ್ರಾಫಿಕ್ ಪೊಲೀಸರು!

ಹೆಲ್ಮೆಟ್ ಇಲ್ಲದೆ ಸೈಕಲ್‌ ಚಲಾಯಿಸಿದ್ದಕ್ಕೆ 2 ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ! ದಂಡದ ಹಣ ನೀಡದಿದ್ದರೆ ಸೈಕಲ್ ಜಪ್ತಿ ಮಾಡುವುದಾಗಿಯೂ ಬೆದರಿಸಿದ್ರು.

ಸೈಕಲ್​ ಸವಾರನನ್ನು ಪೊಲೀಸರು ವಿಚಾರಣೆಗೊಳಪಡಿಸಿರುವ ದೃಶ್ಯವನ್ನು ಅನಾಮಿಕ ವ್ಯಕ್ತಿಯೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

ABOUT THE AUTHOR

...view details