ಸುಬರ್ಣಾಪುರ(ಒಡಿಶಾ):ಲಾಕ್ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯಲ್ಲೇ ಮದುವೆಯಾದ ಘಟನೆ ಒಡಿಶಾದ ಸುಬರ್ಣಾಪುರ ಜಿಲ್ಲೆಯಲ್ಲಿ ನಡೆದಿದೆ.
ಲಾಕ್ಡೌನ್ ಎಫೆಕ್ಟ್... ಪೊಲೀಸ್ ಠಾಣೆಯಲ್ಲೇ ನಡೀತು ಸಬ್ಇನ್ಸ್ಪೆಕ್ಟರ್ ವಿವಾಹ! - ಪೊಲೀಸ್ ಠಾಣೆಯಲ್ಲೆ ವಿವಾಹ
ಲಾಕ್ಡೌನ್ ಹಿನ್ನೆಲೆಯಲ್ಲಿ ನಿಶ್ಚಯವಾದ ವಿವಾಹವನ್ನು ಮುಂದೂಡದೆ ಸಬ್ ಇನ್ಸ್‌ಪೆಕ್ಟರ್, ಠಾಣೆಯಲ್ಲೇ ವಧುವನ್ನು ವರಿಸಿದ್ದಾರೆ.
ಠಾಣೆಯಲ್ಲೇ ನಡೀತು ಸಬ್ ಇನ್ಸ್‌ಪೆಕ್ಟರ್ ವಿವಾಹ
ದೀಪ್ತಿ ರಂಜನ್ ದಿಗಲ್ ಒಡಿಶಾದ ಸುಬರ್ಣಾಪುರ ಜಿಲ್ಲೆಯ ಸುಬಲಾಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದೇ ಜಿಲ್ಲೆಯ ಜ್ಯೋತ್ಸ್ನಾ ದಿಗಲ್ ಎಂಬುವರ ಜೊತೆ ಹಿರಿಯರು ವಿವಾಹ ನಿಶ್ಚಯ ಮಾಡಿದ್ದರು. ಆದರೆ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ವಿವಾಹವನ್ನು ಸರಳವಾಗಿ ನಡೆಸಲು ತೀರ್ಮಾನ ತೆಗೆದುಕೊಂಡಿದ್ದರು.
ವಧು ಜ್ಯೋತ್ಸ್ನಾ ದಿಗಲ್ ಮತ್ತು ಆಕೆಯ ಪೋಷಕರು ಸುಬಲಾಯ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮಕ್ಷಮದಲ್ಲಿ ಸಬ್ ಇನ್ಸ್‌ಪೆಕ್ಟರ್ ದೀಪ್ತಿ ರಂಜನ್ ದಿಗಲ್ ವಿವಾಹ ನೆರವೇರಿದೆ.