ಕರ್ನಾಟಕ

karnataka

ETV Bharat / bharat

ವಿವಾದದಲ್ಲಿ ಟಿವಿ9... ಆಫೀಸ್​, ಸಿಇಒ ಮನೆ ಮೇಲೆ ಪೊಲೀಸರಿಂದ ದಾಳಿ! -

ವಿವಾದದಲ್ಲಿ ಟಿವಿ9 ಸಿಇಒ

By

Published : May 9, 2019, 1:40 PM IST

Updated : May 9, 2019, 2:12 PM IST

2019-05-09 13:33:48

ವಿವಾದದಲ್ಲಿ ಟಿವಿ9 ಮಾಧ್ಯಮ!

ಹೈದರಾಬಾದ್​: ಟಿವಿ9 ಆಫೀಸ್​ ಮೇಲೆ​ ಪೊಲೀಸರು ದಾಳಿ ನಡೆಸಿದ್ದಾರೆ. ಸುದ್ದಿವಾಹಿನಿಯ ಕಚೇರಿ, ಸಿಇಒ ಮತ್ತು ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಹೈದರಾಬಾದ್​ ಟಿವಿ 9 ಚಾನಲ್​ ಷೇರುಗಳ ಮಾರಾಟ, ಮಾಲೀಕತ್ವ ವಿನಿಮಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಇತ್ತೀಚೆಗೆ ಟಿವಿ 9 ತೆಲುಗು ಮಾಧ್ಯಮ ಸಂಸ್ಥೆಯನ್ನು ಅಲಂದಾ ಮೀಡಿಯಾ ನಿರ್ವಹಣೆ ಮಾಡುತ್ತಿತ್ತು. ಆದ್ರೆ ಚಾನೆಲ್​ ನಿರ್ವಹಣೆಗೆ ಸಂಬಂಧಿಸಿದ ಕೆಲ ಪತ್ರಗಳು ನಾಪತ್ತೆಯಾಗಿದ್ದು, ಇನ್ನೂ ಕೆಲ ಪತ್ರಗಳನ್ನು ಫೋರ್ಜರಿ ಮಾಡಲಾಗಿದೆ ಎಂಬ ಆರೋಪವನ್ನು ಅಲಂದಾ ಮೀಡಿಯಾ ಮಾಡಿದೆ.  

ಇನ್ನು, ಟಿವಿ9 ಸಿಇಒ ರವಿಪ್ರಕಾಶ್​ ಮೇಲೆ ಅಲಂದಾ ಮಾಧ್ಯಮ ಕಾರ್ಯದರ್ಶಿ ಕಾಶಿಕ್​ ರಾವು ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಟಿವಿ9 ಕಚೇರಿ ಮತ್ತು ಸಿಇಒ ರವಿಪ್ರಕಾಶ್​ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. 

Last Updated : May 9, 2019, 2:12 PM IST

ABOUT THE AUTHOR

...view details