ಕೊಲಂಬೋ: ರಾಜಧಾನಿಯಲ್ಲಿ 7 ಕಡೆ ಸರಣಿ ಬಾಂಬ್ ಸ್ಫೋಟ ನಡೆದ ಬಳಿಕ 8 ನೇ ಸ್ಫೋಟ ಆತ್ಮಹತ್ಯಾ ಮಾನವ ಬಾಂಬರ್ ಮೂಲಕ ನಡೆದಿದೆ ಎಂದು ಇಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
'ಆತ್ಮಹತ್ಯಾ ಬಾಂಬ್' ಮೂಲಕ 8 ನೇ ದಾಳಿ! ಕರ್ಫ್ಯೂ ಹೇರಿಕೆ, ಸಾಮಾಜಿಕ ಜಾಲತಾಣಗಳಿಗೆ ನಿಷೇಧ - ಬಾಂಬ್ ಸ್ಫೋಟ
ಸರಣಿ ಬಾಂಬ್ ಸ್ಫೋಟಕ್ಕೆ ನೆರೆಯ ಶ್ರೀಲಂಕಾ ಅಕ್ಷರಶ: ನಲುಗಿ ಹೋಗಿದೆ. ರಾಜಧಾನಿಯಲ್ಲಿ ನಡೆದ 8 ನೇ ಬಾಂಬ್ ದಾಳಿ ಆತ್ಮಹತ್ಯಾ ಬಾಂಬರ್ ಮೂಲಕ ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ
ಇದುವರೆಗಿನ ಮಾಹಿತಿ ಪ್ರಕಾರ, ಸ್ಫೋಟದಲ್ಲಿ 180 ಜನರು ಸಾವಿಗೀಡಾಗಿದ್ದು, 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದೇ ವೇಳೆ, ಜನರು ಆತಂಕಕ್ಕೊಳಗಾಗುವುದನ್ನು ತಡೆಯಲು ಸಾಮಾಜಿಕ ಮಾಧ್ಯಮಗಳಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಅದೇ ರೀತಿ ಸರ್ಕಾರದ ಮುಂದಿನ ಆದೇಶದವರೆಗೂ ಕೊಲಂಬೋದಲ್ಲಿ ಕರ್ಫ್ಯೂ ಹೇರಲಾಗಿದೆ.