ಕೃಷ್ಣಾ(ಆಂಧ್ರ ಪ್ರದೇಶ): ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಜಪ್ತಿ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಳ್ಳಭಟ್ಟಿ ತಯಾರಿಸುವ ಅಡ್ಡೆ ಮೇಲೆ ಪೊಲೀಸರ ದಾಳಿ: 15 ಸಾವಿರ ಲೀಟರ್ ಕೊಳೆ ಜಪ್ತಿ - ಆಂಧ್ರ ಪ್ರದೇಶ ಸುದ್ದಿ
ಕೃಷ್ಣಾ ಜಿಲ್ಲೆಯ ಗಂದ್ರಾಂ, ಗೌಡಾ ಪಾಲೆಂ ಮತ್ತು ನಾಯ್ಡುಪೇಟಾ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ, 5 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ.
ಕಳ್ಳಭಟ್ಟಿ ಜಪ್ತಿ
ಕೃಷ್ಣಾ ಜಿಲ್ಲೆಯ ಗಂದ್ರಾಂ, ಗೌಡಾ ಪಾಲೆಂ ಮತ್ತು ನಾಯ್ಡುಪೇಟಾ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮದ್ಯ ತಯಾರಿಕೆಗೆ ಬಳಸುತ್ತಿದ್ದ 15 ಸಾವಿರ ಲೀಟರ್ ಬೆಲ್ಲದ ಮಿಶ್ರಣ ಮತ್ತು 5 ಲೀಟರ್ ಕಳ್ಳಭಟ್ಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಪೊಲೀಸರು ಅದನ್ನು ಚೆಲ್ಲುವ ಮೂಲಕ ನಾಶ ಮಾಡಿದ್ದಾರೆ.