ಕರ್ನಾಟಕ

karnataka

ETV Bharat / bharat

ಲಾಕ್​​ಡೌನ್​ ಪಾಲಿಸಿ ಎಂದ ಪೊಲೀಸರಿಗೇ ದಿಗ್ಬಂಧನ ! - ಪೊಲೀಸರಿಗೆ ದಿಗ್ಭಂಧನ ಹಾಕಿದ ಗ್ರಾಮಸ್ಥರು

ಲಾಕ್​ಡೌನ್​ ನಿಯಮಗಳನ್ನು ಪಾಲಿಸದಿರುವುದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಮಧ್ಯಪ್ರದೇಶದ ರಾಂಪುರಿಯಾ ಗ್ರಾಮದಲ್ಲಿ ನಡೆದಿದೆ.

Police personnel held hostage by locals in a Madhya Pradesh village
Police personnel held hostage by locals in a Madhya Pradesh village

By

Published : Apr 20, 2020, 5:48 PM IST

ಮಧ್ಯಪ್ರದೇಶ :ಪ್ರಕರಣವೊಂದರ ತನಿಖೆಗೆಂದು ತೆರಳಿದ ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿ ದಾಳಿ ನಡೆಸಲು ಮುಂದಾದ ಘಟನೆ ರಾಜ್​ಘರ್​ ಜಿಲ್ಲೆಯ ರಾಂಪುರಿಯಾ ಗ್ರಾಮದಲ್ಲಿ ನಡೆದಿದೆ.

ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಪ್ರಕರಣವೊಂದರ ಹೆಚ್ಚಿನ ತನಿಖೆಗೆಂದು ಪೊಲೀಸರು ಗ್ರಾಮಕ್ಕೆ ತೆರಳಿದಾಗ, ಅಲ್ಲಿ ಲಾಕ್​​ಡೌನ್​ ನಿಯಮಗಳು ಪಾಲನೆಯಾಗದಿರುವುದು ಕಂಡು ಬಂದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆ, ಕಲ್ಲು ಹಿಡಿದುಕೊಂಡು ಪೊಲೀಸರ ಮೇಲೆ ದಾಳಿ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣ ಹೆಚ್ಚುವರಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಪೊಲೀಸರ ಮೇಲೆ ದಾಳಿಗೆ ಮುಂದಾದ ಗ್ರಾಮಸ್ಥರು

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿತ್ತು, ಹೀಗಾಗಿ ಪೊಲೀಸರನ್ನು ಕಂಡ ತಕ್ಷಣ ಗ್ರಾಮಸ್ಥರು ದಾಳಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

ABOUT THE AUTHOR

...view details