ಥಾಣೆ (ಮಹಾರಾಷ್ಟ್ರ): ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಆರತಿ ಬೆಳಗುವ ಮೂಲಕ ಮಹಾರಾಷ್ಟ್ರ ಪೊಲೀಸರು ವಿಶಿಷ್ಟವಾಗಿ ಜಾಗೃತಿ ಮೂಡಿಸಿದ್ದಾರೆ.
ಲಾಕ್‌ಡೌನ್ ನಿಯಮ ಉಲ್ಲಂಘನೆ.. ರಸ್ತೆಗಿಳಿದವರಿಗೆ ಆರತಿ ಬೆಳಗಿದ ಪೊಲೀಸರು - ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು
ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್ ಘೋಷಣೆ ಮಾಡಿ ಮನೆಯಲ್ಲೇ ಇರುವಂತೆ ಎಚ್ಚರಿಕೆ ನೀಡಿದ್ದರೂ ರಸ್ತೆಗಿಳಿದ ಜನರಿಗೆ ಪೊಲೀಸರು ಆರತಿ ಬೆಳಗಿದ್ದಾರೆ.
ರಸ್ತೆಗಿಳಿದವರಿಗೆ ಆರತಿ ಬೆಳಗಿದ ಪೊಲೀಸರು
ಬೆಳಗ್ಗೆ ವಾಕಿಂಗ್ ಮಾಡಲು ರಸ್ತೆಗಿಳಿದವರಿಗೆ ಮಹಿಳಾ ಪೊಲೀಸರು ಆರತಿ ಬೆಳಗುವ ದೃಶ್ಯ ಕಂಡುಬಂತು. ಈ ವೇಳೆ, ಕೆಲ ಯುವಕರು ನಾಚಿಕೆಯಿಂದ ತಲೆ ತಗ್ಗಿಸಿಕೊಂಡಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹೊರ ಹೋಗುವುದರಿಂದ ಆಗುವ ಪರಿಣಾಮಗಳನ್ನು ಹಾಡಿನ ಮೂಲಕ ತಿಳಿಸಿದ್ದಾರೆ.