ಹರಿಯಾಣ: ಶಹಜಹಾನಪುರ ಗಡಿ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ - Lathi charge on farmers in Shahjahanpur, Haryana
ಹರಿಯಾಣದ ಶಹಜಹಾನಪುರ ಗಡಿ ಬಳಿ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ದಾರೆ.
ಹರಿಯಾಣ ಪೊಲೀಸರು ಧರುಹೆರಾ ಬಳಿ ರೈತರನ್ನು ತಡೆದಿದ್ದರಿಂದ 3 ದಿನಗಳ ಕಾಲ ರೈತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಲಗಿದ್ದರು. ಇದರಿಂದಾಗಿ 5 ಕಿಲೋಮೀಟರ್ ಸಂಚಾರ ಅಸ್ತವ್ಯಸ್ಥವಾಗಿದೆ. ಇದಲ್ಲದೇ ರಾಜಸ್ಥಾನದ ಗಡಿಯಿಂದ ಧರುಹೆರಾದಲ್ಲಿ 4 ದಿನಗಳ ಹಿಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಲಾಗಿದೆ. ಇಂದು ಸಹ ಹರಿಯಾಣ ಗಡಿಯಿಂದ ಹೆಚ್ಚಿನ ಸಂಖ್ಯೆಯ ರೈತರು ಆಗಮಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಕ್ಸ್ ರೈತ ಸಂಘಟನೆಯ ಪ್ರತಿನಿಧಿ ರಾಜು ಪಂಜಾಬಿ, ರೈತರ ಹೋರಾಟ ಮುಂದುವರೆಯುತ್ತದೆ. ನಾವು ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ, ಹರಿಯಾಣ ಪೊಲೀಸರ ಅನಾಗರಿಕತೆಗೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ.
TAGGED:
ಹರಿಯಾಣದ ಶಹಜಹಾನಪುರ