ಲಕ್ನೋ: ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಧರಣಿ ನಡೆಸುತ್ತಿರುವ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿರುವ ಘಟನೆ ಉತ್ತರ ಪ್ರದೇಶ ಲಕ್ನೋನಲ್ಲಿ ನಡೆದಿದೆ.
ಸಿಎಎ ವಿರೋಧಿಸಿ ಮಹಿಳೆಯರ ಧರಣಿ: ಮಧ್ಯರಾತ್ರಿ ಪೊಲೀಸರಿಂದ ಲಾಠಿಚಾರ್ಜ್! - ಲಕ್ನೋ ಪೊಲೀಸ್ ಲಾಠಿಚಾರ್ಜ್
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಮಧ್ಯರಾತ್ರಿ ಪೊಲೀಸರಿಂದ ಲಾಠಿಚಾರ್ಜ್
ಸುಮಾರು 47 ದಿನಗಳಿಂದ ಮಹಿಳೆಯರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಲಕ್ನೋದಲ್ಲಿ ಧರಣಿ ನಡೆಸುತ್ತಿದ್ದರು. ಕಳೆದ ಮಧ್ಯರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪ್ರತಿಭಟನಾನಿರತ ಕೆಲ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿನದಿಂದ ದಿನಕ್ಕೆ ದೇಶಾದ್ಯಂತ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಹೋರಾಟದ ಕಾವು ಹೆಚ್ಚಾಗತೊಡಗಿದೆ.