ಇಂದೋರ್(ಮಧ್ಯಪ್ರದೇಶ):ಇಲ್ಲಿನ ಪೊಲೀಸರು ಲಾಕ್ಡೌನ್ ನಡುವೆಯೂ ಮನೆಯಿಂದ ಹೊರಬರುವ ಜನರನ್ನು ನಿಯಂತ್ರಿಸಲು ವಿಭಿನ್ನ ಉಪಾಯ ಹೆಣೆದಿದ್ದಾರೆ.
ಸಂಜೆಯಾಗುತ್ತಿದ್ದಂತೆ ಇಲ್ಲಿ ಬೀದಿಗಿಳಿಯುತ್ತವೆ ದೆವ್ವಗಳು! ಇದರ ಮರ್ಮವೇನು ಗೊತ್ತಾ! - Indore police awareness video
ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಇಲ್ಲಿನ ಜನರು ಮಾತ್ರ ಜನನಿಬಿಡ ಪ್ರದೇಶಗಳಲ್ಲಿ ತಿರುಗಾಡುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಇಲ್ಲಿನ ಪೊಲೀಸರು ಜನರನ್ನು ನಿಯಂತ್ರಿಸಲು ವಿಭಿನ್ನ ಉಪಾಯ ಹೆಣೆದಿದ್ದಾರೆ.
ಇಂದೋರ್ನಲ್ಲಿ ಬೀದಿಗಿಳಿಯುತ್ತೆ ದೆವ್ವಗಳು
ದೇಶದಲ್ಲಿ ಲಾಕ್ಡೌನ್ ಇದ್ದರೂ, ಪೊಲೀಸರು ಸ್ಥಳದಿಂದ ಗೈರಾದ ತಕ್ಷಣ ಜನರು ಬೀದಿಗಿಳಿಯುತ್ತಿದ್ದಾರೆ. ಹೀಗಾಗಿ ಇಂದೋರ್‌ನ ವಿಜಯ ನಗರ ಪೊಲೀಸರು ಜನರನ್ನು ಸರಿದಾರಿಗೆ ತರಲು ರಾತ್ರಿಯಲ್ಲಿ ದೆವ್ವಗಳಾಗಿ ತಿರುಗಾಡುತ್ತಿದ್ದಾರೆ.
ಹೌದು ಇಂದೋರ್‌ನ ಕೆಲ ಬೀದಿಗಳಲ್ಲಿ ಪೊಲೀಸರು ರಾತ್ರಿ ವೇಳೆ ದೆವ್ವಗಳ ವೇಷ ಹಾಕಿ ಜನರಲ್ಲಿ ಬೀದಿಗೆ ಬರದಂತೆ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಕೊರೊನಾದಿಂದ ಜಾಗೃತರಾಗಿ ಮನೆಯಲ್ಲೇ ಉಳಿಯುವಂತೆ ಜನರಿಗೆ ಪರಿಣಾಮಕಾರಿ ಸಂದೇಶ ನೀಡುತ್ತಿದ್ದಾರೆ.