ಕಾನ್ಪುರ (ಉತ್ತರ ಪ್ರದೇಶ): ವಿಕಾಸ್ ದುಬೆ ಖಜಾಂಚಿ ಜೈ ಬಾಜಪೇಯಿ ವಿರುದ್ಧ ಪೊಲೀಸರು ಗುಂಡಾ ಕಾಯ್ದೆ ವಿಧಿಸಿದ್ದಾರೆ. ಗ್ಯಾಂಗ್‌ಗಳನ್ನು ಸಂಘಟಿಸುವ ಮೂಲಕ ಅಪರಾಧ ಎಸಗಿದ್ದಕ್ಕಾಗಿ ಬಾಜಪೇಯಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಕಾಸ್ ದುಬೆಗೆ ಸಹಾಯ ಮಾಡಿದ್ದಕ್ಕಾಗಿ ಜೈ ಅವರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ.
ಗ್ಯಾಂಗ್‌ಗಳನ್ನು ಸಂಘಟಿಸುವ ಮತ್ತು ಅಕ್ರಮ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವ ಜೈ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಜೈ ಅಪರಾಧದಲ್ಲಿ ಪಾಲ್ಗೊಳ್ಳುವ ಮೂಲಕ ಕೋಟ್ಯಂತರ ಮೌಲ್ಯದ ಆಸ್ತಿ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ವಿಕಾಸ್ ದುಬೆ ಖಜಾಂಚಿ ಜೈ ಬಾಜ್‌ಪೈ ಪೊಲೀಸ್ ತನಿಖೆಯಲ್ಲಿ, ಜೈ ಮನೆಯ ದಾಖಲೆಗಳನ್ನು ಪರಿಶೀಲಿಸಿದಾಗ ಅವನು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ. ಜೈ ಬಾಜಪೇಯಿ ಆಸ್ತಿ ಕುರಿತು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.
ಜೈ ಬಾಜ್‌ಪೈ ಮೇಲೆ ಗುಂಡಾ ಕಾಯ್ದೆ ವಿಧಿಸಿದ ಪೊಲೀಸರು ಜೈ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದು ದರೋಡೆ ಮತ್ತು ಹಲ್ಲೆಯಂತಹ ಘಟನೆಗಳನ್ನು ಒಳಗೊಂಡಿದೆ.
ಜೈ ವಿರುದ್ಧ ದಾಖಲಾದ ಹಳೆಯ ಪ್ರಕರಣಗಳೆಲ್ಲವನ್ನೂ ತೆರೆದು, ಪೊಲೀಸರ ಯಾವುದೇ ನಿರ್ಲಕ್ಷ್ಯವಿದ್ದಲ್ಲಿ ಅವುಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.