ಮಹಾರಾಷ್ಟ್ರ/ ಪುಣೆ: ಕಿಲ್ಲರ್ ಕೊರೊನಾ ವಿರುದ್ಧ ಹೋರಾಡಲು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕರೆ ನೀಡಿದ್ದ ಜನತಾ ಕರ್ಫ್ಯೂ ವೇಳೆ ಮೂವರು ಅನಾವಶ್ಯಕವಾಗಿ ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಕಂಡು ಪೊಲೀಸರು ಬಸ್ಕಿ ಹೊಡೆಸಿ ಶಿಕ್ಷೆ ನೀಡಿರುವ ಘಟನೆ ಮಂಚಾರ್ ಸ್ಟ್ಯಾಂಡ್ ಬಳಿಯ ನಕಬಂಡಿ ಬಳಿ ಕಂಡುಬಂದಿದೆ.
ಜನತಾ ಕರ್ಫ್ಯೂ ವೇಳೆ ತಿರುಗಾಡುತ್ತಿದ್ದ ಮೂವರಿಗೆ ಬಸ್ಕಿ ಹೊಡೆಸಿದ ಪೊಲೀಸ್: ವಿಡಿಯೋ ವೈರಲ್ - ಕರ್ಫ್ಯೂ ವೇಳೆ ತಿರುಗಾಡುತ್ತಿದ್ದ ಮೂವರಿಗೆ ಬಸ್ಕಿ ಹೊಡೆಸಿದ ಪೊಲೀಸ್
ಜನತಾ ಕರ್ಫ್ಯೂ ವೇಳೆ ಅನವಶ್ಯಕವಾಗಿ ಓಡಾಡುತ್ತಿದ್ದ ಮೂವರು ಯುವಕರಿಗೆ ಪುಣೆ ಪೊಲೀಸರು ಬಸ್ಕಿ ಹೊಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಮೂರು ಜನ ಯುವಕರು ಯಾವುದೇ ಕೆಲಸವಿಲ್ಲದಿದ್ದರೂ ಸಹ ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಪೊಲೀಸರು ಮೂವರಿಗೂ ಬಸ್ಕಿ ಹೊಡೆಯುವಂತೆ ( ಕಿವಿಯನ್ನು ಕೈಯ್ಯಲ್ಲಿ ಹಿಡಿಕೊಂಡು ಕೂರುವುದು ನಂತರ ಎದ್ದೇಳುವುದು) ಸೂಚಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ದೇಶಾದ್ಯಂತ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪುಣೆಯ ಕೆಲವು ಭಾಗಗಳಲ್ಲಿ ಜನರು ಸಂಜೆ 5 ಗಂಟೆಗೆ ಬಾಲ್ಕನಿ ಮೇಲೆ ನಿಂತು ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸಿದರೆ, ಇನ್ನೂ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.