ಕರ್ನಾಟಕ

karnataka

ETV Bharat / bharat

ಕರ್ತವ್ಯನಿರತ ಸ್ಥಳದಿಂದಲೇ ನಮಾಜ್... ಎಲ್ಲರ ಮನಗೆದ್ದ ಪೊಲೀಸ್​!

ದೇಶದಲ್ಲಿ ಲಾಕ್​ಡೌನ್​ ಹೇರಲಾಗಿದ್ದು, ಇದರ ಮಧ್ಯೆ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವೂ ಶುರುವಾಗಿದೆ. ಆದರೆ ಸಾಮೂಹಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಎಲ್ಲರೂ ಮನೆಯಿಂದಲೇ ನಮಾಜ್​ ಮಾಡ್ತಿದ್ದಾರೆ.

police constable
police constable

By

Published : May 1, 2020, 5:39 PM IST

ಗ್ರೇಟರ್​ ನೋಯ್ಡಾ(ಯುಪಿ):ದೇಶಾದ್ಯಂತ ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಎಲ್ಲರೂ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇವೆಲ್ಲದರ ನಡುವೆ ಬಿಡುವಿಲ್ಲದೇ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲೊಬ್ಬ ಪೊಲೀಸ್​ ಪೇದೆ ,ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಿಂದಲೇ ನಮಾಜ್​ ಮಾಡಿದ್ದಾರೆ.

ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನದೀಮ್​ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಮಸೀದಿಗೆ ತೆರಳಿ ನಮಾಜ್​ ಮಾಡದಂತಹ ಸ್ಥಿತಿ ನಿರ್ಮಾಣಗೊಂಡಿರುವ ಕಾರಣ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಿಂದಲೇ ಈ ಕಾರ್ಯ ಮಾಡಿದ್ದಾರೆ. ಇವರಿಗೆ ಮತ್ತೊಬ್ಬ ಪೊಲೀಸ್​ ಪೇದೆ ಸಹಾಯ ಮಾಡಿದ್ದಾರೆ.

ದೇಶದಲ್ಲಿ ಇದೀಗ ರಂಜಾನ್​ ತಿಂಗಳಿರುವ ಕಾರಣ ಮುಸ್ಲಿಂ ಬಾಂಧವರು ಮನೆಯಲ್ಲಿದ್ದುಕೊಂಡು ನಮಾಜ್​ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಪೊಲೀಸ್​ ಪೇದೆ ತಾವು ಕೆಲಸ ಮಾಡ್ತಿದ್ದ ಸ್ಥಳದಿಂದಲೇ ನಮಾಜ್​ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರು ನಮಾಜ್​ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲೆ ಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details