ಕರ್ನಾಟಕ

karnataka

ETV Bharat / bharat

ಪೊಲೀಸ್​​ ಪೇದೆ​ ಮೇಲೆ ಹಲ್ಲೆ: ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪಾರಾದ ಪೇದೆ - ಪೊಲೀಸ್ ಪೇದೆ​ ಮೇಲೆ ಹಲ್ಲೆ

ಕರ್ತವ್ಯನಿರತ ಪೊಲೀಸ್​ ಪೇದೆ ಮೇಲೆ ನವದೆಹಲಿಯ ಜೆಜೆ ಕಾಲೋನಿ ನಿವಾಸಿಗಳು ಹಲ್ಲೆ ನಡೆಸಿದ್ದು, ಓರ್ವ ಆರೋಪಿಯನ್ನ ಬಂಧಿಸಲಾಗಿದೆ.

ಪೊಲೀಸ್​ ಮೇಲೆ ಹಲ್ಲೆ

By

Published : Aug 4, 2019, 8:59 AM IST

ನವದೆಹಲಿ:ಕಲಿಂದಿ ಕುಂಜ್ ನಗರದ ಜೆಜೆ ಕಾಲೋನಿ ನಿವಾಸಿಗಳು ಕರ್ತವ್ಯನಿರತ ಪೊಲೀಸ್​ ಪೇದೆ ಮೇಲೆ ಹಲ್ಲೆ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ಪೇದೆ ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಪೊಲೀಸ್ ಪೇದೆ​ ರಾಮಕೃಷ್ಣ ಜೆಜೆ ಕಾಲೋನಿ ಬಳಿ ಗಸ್ತು ತಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ತಮ್ಮ ಮನೆ ಹೊರಗೆ ನಿಂತುಕೊಂಡು ಗಲಾಟೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ ಪೇದೆ, ಏನೆಂದು ವಿಚಾರಿಸಿದ್ದಾನೆ. ಆಗ ಪೇದೆ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ದ್ವಿಚಕ್ರ ವಾಹನಕ್ಕೆ ಹಾನಿ ಉಂಟುಮಾಡಿದ್ದಾರೆ.

ಸ್ವಲ್ಪ ಹೊತ್ತಲ್ಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪೊಲೀಸ್​ ಪೇದೆ ರಾಮಕೃಷ್ಣ ಜೊತೆ ಜಗಳ ಮಾಡುತ್ತ ಹಲ್ಲೆಗೂ ಮುಂದಾಗುತ್ತಾರೆ. ಈ ವೇಳೆ ಪ್ರಾಣ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಪೇದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.

ABOUT THE AUTHOR

...view details