ಅಹಮದಾಬಾದ್ (ಗುಜರಾತ್): ಒಂದು ವರ್ಷದ ಮಗುವನ್ನು ಹಿಡಿದುಕೊಂಡು ಮಹಿಳಾ ಪೊಲೀಸ್ ಪೇದೆಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಅಹಮಾದಾಬಾದ್‌ನಲ್ಲಿ ಕಂಡುಬಂತು.
ಒಂದೆಡೆ ಕರ್ತವ್ಯದ ಪ್ರಜ್ಞೆ ಮತ್ತೊಂದೆಡೆ ಪುಟ್ಟ ಮಗುವಿನ ಕೂಗು: ಮಹಿಳಾ ಪೊಲೀಸ್ ಪೇದೆಯ 'ಡಬಲ್ ಡ್ಯೂಟಿ' - ಅಹಮದಾಬಾದ್ನ ವಿಸಾತ್ ಪ್ರದೇಶ‘
ಅಹಮದಾಬಾದ್ನ ಮಹಿಳಾ ಪೊಲೀಸ್ ಪೇದೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಮಗುವನ್ನು ತನ್ನ ಬಳಿ ಇಟ್ಟುಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದರು.
ರ್ತವ್ಯ ಮರೆಯದ ಮಹಿಳಾ ಪೊಲೀಸ್ ಪೇದೆ
ನಗರದ ವಿಸಾತ್ ಪ್ರದೇಶದ ಠಾಣೆಯಲ್ಲಿ ಸಂಗೀತಾ ಪಾರ್ಮರ್ ಎಂಬ ಮಹಿಳಾ ಪೇದೆ ಕರ್ತವ್ಯ ನಿರ್ವಹಣೆಯ ಜೊತೆಜೊತೆಗೆ, ತನ್ನ ಕೆಲಸದ ನಡುವೆಯೂ ಮಗುವಿನ ಲಾಲನೆಯಲ್ಲಿಯೂ ತೊಡಗಿದ್ದರು.
ಈ ಬಗ್ಗೆ ಮಾತನಾಡಿರುವ ಅವರು, ತಾಯಿಯಾಗಿ ಮತ್ತು ಪೊಲೀಸ್ ಪೇದೆಯಾಗಿ ಎರಡೂ ಕೆಲಸಗಳನ್ನೂ ನಿರ್ವಹಿಸುವುದು ಕಷ್ಟ. ಆದರೂ ಇದು ನನ್ನ ಕರ್ತವ್ಯ. ಮಗುವಿಗೆ ಹುಷಾರಿಲ್ಲ, ಆದ್ದರಿಂದ ಮೊಲೆ ಹಾಲುಣಿಸಲು ಕರೆದುಕೊಂಡು ಬಂದಿರುವೆ ಎಂದು ತಿಳಿಸಿದ್ದಾರೆ.