ತೆಲಂಗಾಣ:ಸ್ವಾತಂತ್ರ್ಯೋತ್ಸವ ದಿನದಂದು 'ಅತ್ಯುತ್ತಮ ಪೊಲೀಸ್ ಪೇದೆ' ಎಂಬ ಪ್ರಶಸ್ತಿ ಪಡೆದು ಎಲ್ಲರಿಂದಲೂ ಶಹಬ್ಬಾಶ್ಗಿರಿ ಗಿಟ್ಟಿಸಿಕೊಂಡ ವ್ಯಕ್ತಿ ಮರುದಿನವೇ ಲಂಚ ಪಡೆದು ಸಿಕ್ಕಿಬಿದ್ದು ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಬೆಸ್ಟ್ ಕಾನ್ಸ್ ಟೇಬಲ್ ಅವಾರ್ಡ್ ಮೆಹಬೂಬ್ನಗರದ ಐ-ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಪಲ್ಲೆ ತಿರುಪತಿ ರೆಡ್ಡಿ ಅಬಕಾರಿ ಸಚಿವ ವಿ ಶ್ರೀನಿವಾಸ್ ಗೌಡ್ರಿಂದ ಬೆಸ್ಟ್ ಕಾನ್ಸ್ಟೆಬಲ್ ಅವಾರ್ಡ್ ಪಡೆದುಕೊಂಡಿದ್ದರು. ಮರುದಿನವೇ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ)ದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಸ್ಟ್ ಕಾನ್ಸ್ ಟೇಬಲ್ ಅವಾರ್ಡ್ ಪೊಲೀಸ್ ಠಾಣೆಗೆ ರಮೇಶ್ ಎಂಬ ವ್ಯಕ್ತಿ ಕೇಸು ದಾಖಲಿಸಲು ಬಂದಾಗ ಈ ಪೇದೆ 17 ಸಾವಿರ ರೂ ಹಣ ಕೊಡುವಂತೆ ಪೀಡಿಸಿದ್ದಾರೆ. ಹೀಗೆ ಹಣ ನೀಡಲು ಬಂದಾಗ ಕಾನ್ಸ್‌ಟೇಬಲ್ ತಿರುಪತಿ ರೆಡ್ಡಿ ರೆಡ್‌ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಭ್ರಷ್ಟ ಸರ್ಕಾರಿ ನೌಕರನನ್ನು ಬಂಧಿಸಿರುವ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಭ್ರಷ್ಟಾಚಾರ ವಿರೋಧಿ ದಳದ ಅಧಿಕಾರಿಗಳು ಇದೇ ರೀತಿ 'ಬೆಸ್ಟ್ ತಹಶಿಲ್ದಾರ್' ಎಂಬ ಅವಾರ್ಡ್ ಪಡೆದುಕೊಂಡಿದ್ದ ಅಧಿಕಾರಿಯೋರ್ವನ ಮನೆ ಮೇಲೆ ದಾಳಿ ನಡೆಸಿದ್ದರು. ಅಚ್ಚರಿ ಎಂಬಂತೆ ಆತನ ನಿವಾಸದಲ್ಲಿ ಅಕ್ರಮವಾಗಿ ಸಂಪಾದಿಸಿದ್ದ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನಾಭರಣ ಸಿಕ್ಕಿತ್ತು.