ಲಕ್ನೋ (ಉತ್ತರ ಪ್ರದೇಶ):ವಾಟ್ಸಪ್ ನಂಬರ್ ಡಯಲ್ 112ಕ್ಕೆ ಸಂದೇಶ ಕಳುಹಿಸುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ ಅಮರ್‌ಪಾಲ್ ಎಂಬುವವನನ್ನು ಹಜರತ್‌ಗಂಜ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ
ಯೋಗಿ ಆದಿತ್ಯನಾಥ್ ಅವರ ಡಯಲ್ 112 ವಾಟ್ಸಪ್ ನಂಬರ್ಗೆ ಸಂದೇಶ ಕಳುಹಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
yogi
ಕಳೆದ 23ರಂದು ಇತಾಹ್ ಪ್ರದೇಶದ ನಿವಾಸಿ ಅಮರ್‌ಪಾಲ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಡಯಲ್ 112 ವಾಟ್ಸಪ್ ನಂಬರ್ಗೆ ಸಂದೇಶ ಕಳುಹಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹಜರತ್‌ಗಂಜ್ ಎಸ್‌ಹೆಚ್‌ಒ ಅಂಜನಿ ಕುಮಾರ್ ಪಾಂಡೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ವಾಟ್ಸಪ್ ಸಂಖ್ಯೆ 112ಕ್ಕೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಸಭ್ಯ ಭಾಷೆ ಬಳಸಿ, ಮುಖ್ತಾರ್ ಅನ್ಸಾರಿ ವಿರುದ್ಧ ಕೈಗೊಂಡ ಕ್ರಮದ ಬಗ್ಗೆಯೂ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.