ನವದೆಹಲಿ: ಕೊರೊನಾ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ಜನತಆ ಕರ್ಫ್ಯೂಗೆ ಬೆಂಬಲ ನೀಡಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್, ಬಾಲ್ಟಿಸ್ತಾನದಲ್ಲಿ ಗಡಿಪಾರಾಗಿರುವ ನಾಯಕರು ಮೋದಿ ನಡೆಗೆ ಬೆಂಬಲ ಸೂಚಿಸಿದ್ದಾರೆ. ಪಾಕ್ ಆಕ್ರಮಿತ ಪ್ರದೇಶದ ರಾಜಕೀಯ ನಾಯಕನಾಗಿರುವ ಹಾಗೂ ಗ್ಲಾಸ್ಗೋದಲ್ಲಿ ನೆಲೆಸಿರುವ ಡಾ. ಅಮ್ಜದ್ ಅಯೂಬ್ ಮಿರ್ಜಾ '' ಕೊರೊನಾ ವಿರುದ್ಧ ಪ್ರಧಾನಿ ಮೋದಿ ನಡೆ ಪ್ರಶಂಸನಾರ್ಹ ಹಾಗೂ ಗಮನಾರ್ಹ'' ಎಂದು ಹೊಗಳಿದ್ದಾರೆ.
ಪಾಕಿಸ್ತಾನದ ಬಗ್ಗೆಯೂ ಮಾತನಾಡಿರುವ ಅಮ್ಜದ್ ಪಾಕಿಸ್ತಾನದಲ್ಲಿ ಸೂಕ್ತ ನಾಯಕತ್ವದ ಕೊರತೆಯಿದೆ. ಇದರಿಂದಾಗಿ ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿದೆ ಎಂದು ಆರೋಪಿಸಿದ್ದಾನೆ. ಜೊತೆಗೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಚೀನಾ ಹಾಗೂ ಗಿಲ್ಗಿಟ್ ನಡುವಿನ ಗಡಿಯನ್ನು ಮುಚ್ಚಬೇಕು ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಇದರ ಜೊತೆಗೆ ಇನ್ನಿತರ ನಾಯಕರು ಕೂಡಾ ಜನತಾ ಕರ್ಫ್ಯೂಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ದೇಶದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ನಾಯಕರ ನಡುವೆ ಜನತಾ ಕರ್ಫ್ಯೂಗೆ ತೀವ್ರ ಪರ, ಪರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಪ್ರದೇಶದ ನಾಯಕರು ಮೋದಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹವಾಗಿದೆ.