ನವದೆಹಲಿ:ಭಾರತದಲ್ಲಿನ ಕೋವಿಡ್ 19 ಪರಿಸ್ಥಿತಿ ನಿಭಾಯಿಸಲು ನರೇಂದ್ರ ಮೋದಿ ಸರ್ಕಾರ ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ನ್ಯೂಸ್ ಏಜೆನ್ಸ್ ಐಎಎನ್ಎಸ್ ನಡೆಸಿದ 'ಸಿವೋಟರ್ ಕೋವಿಡ್-19 ಟ್ರ್ಯಾಕರ್ ಸಮೀಕ್ಷೆ'ಯಲ್ಲಿ ನಾಲ್ವರಲ್ಲಿ ಮೂವರು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯಲ್ಲಿ 1,723 ಜನರನ್ನು ಆಯ್ದುಕೊಳ್ಳಲಾಯಿತು. ಶೇ 77.3ರಷ್ಟು ಜನರು ಸರ್ಕಾರ ಬಿಕ್ಕಟ್ಟನ್ನು ಉತ್ತಮವಾಗಿ ನಿಭಾಯಿಸುತ್ತಿದೆ. ಕೋವಿಡ್ -19 ನಿಭಾಯಿಸುವ ಬಗ್ಗೆ ಮೋದಿ ನೇತೃತ್ವದ ಸರ್ಕಾರ ಎಡವಿದೆ ಎಂದು 19.1ರಷ್ಟು ಸಂವಾದಿಗಳು ಅಭಿಪ್ರಾಯಪಟ್ಟಿದ್ದಾರೆ.
ದೀರ್ಘ ಕಾಲದ ಆರ್ಥಿಕ ವಿರಾಮವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಜನ ಅನುಮೋದನೆಯ ರೇಟಿಂಗ್ ಶೇ. 90-80ರಷ್ಟಿತ್ತು. ಆದರೆ, ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ.
ಹಲವು ತಿಂಗಳಿಂದ ಹೊಸ ಪ್ರಕರಣಗಳು ಗರಿಷ್ಠ ಮಟ್ಟ ತಲುಪುತ್ತಿರುವ ಸುಮಾರು 60 ಪ್ರತಿಶತದಷ್ಟು ಜನರು ಸೋಂಕು ತಗುಲಬಹುದೆಂದು ಭಾವಿಸಿದ್ದಾರೆ. ನಾನು ಅಥವಾ ನನ್ನ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ವೈರಸ್ ತಗುಲಬಹುದೆಂದು ನಾನು ಹೆದರುತ್ತೇನೆ ಎಂಬ ಪ್ರಶ್ನೆಗೆ 59.8ರಷ್ಟು ಜನರು ಒಪ್ಪಿಕೊಂಡಿದ್ದರೇ ಶೇ 34.9ರಷ್ಟು ಜನ ಈ ಪ್ರಸ್ತಾಪ ತಿರಸ್ಕರಿಸಿದ್ದಾರೆ.
ಕೊರೊನಾ ಪರಿಸ್ಥಿತಿ ಭೀತಿಯನ್ನು ಸೃಷ್ಟಿಸಿಲ್ಲ. ಅರ್ಧದಷ್ಟು ಜನರು ಸೋಂಕಿನ ಬೆದರಿಕೆ ಉತ್ಪ್ರೇಕ್ಷಿಸಿದ್ದಾರೆ. ಲಾಕ್‌ಡೌನ್‌ಗಳ ಹೊಸ ಅನುಭವದೊಂದಿಗೆ ಜನರು ದಿನಸಿ ಮತ್ತು ಪಡಿತರ ಸಂಗ್ರಹಿಸುವ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಶೇ 54.3ರಷ್ಟು ಜನರು ಮೂರು ವಾರಗಳಿಗಿಂತ ಹೆಚ್ಚು ಕಾಲ ಪಡಿತರ ಸಂಗ್ರಹಿಸಿದ್ದಾಗಿ ಹೇಳಿಕೊಂಡಿದ್ದಾರೆ. 44.7 ಪ್ರತಿಶತದಷ್ಟು ಜನರು ಮೂರು ವಾರಗಳಿಗಿಂತ ಕಡಿಮೆ ಪಡಿತರ ಇರಿಸಿಕೊಂಡಿದ್ದರು.
ಆಶ್ಚರ್ಯಕರ ಸಂಗತಿಯೆಂದರೇ ಶೇ 91.44ರಷ್ಟು ಜನರು ತಮ್ಮ ಕುಟುಂಬ ಅಥವಾ ಸುತ್ತಮುತ್ತಲಿನಲ್ಲಿ ಯಾರೂ ಸೋಂಕಿಗೆ ಒಳಗಾಗಲಿಲ್ಲ ಎಂದಿದ್ದಾರೆ.