ಮುಂಬೈ:ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಪ್ರಮುಖ ರೂವಾರಿ ನೀರವ್ ಮೋದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಪಿಎಂಎಲ್ಎ ವಿಶೇಷ ನ್ಯಾಯಾಲಯ ಘೋಷಿಸಿದೆ.
ನೀರವ್ ಮೋದಿಗೆ ಆರ್ಥಿಕ ಅಪರಾಧಿ ಎಂದ ಪಿಎಂಎಲ್ಎ ನ್ಯಾಯಾಲಯ - ಪಿಎಂಎಲ್ಎ ವಿಶೇಷ ನ್ಯಾಯಾಲಯ
ಪಂಜಾನ್ ನ್ಯಾಷನಲ್ ಬ್ಯಾಂಕ್ನ ಹಗರಣದ ರೂವಾರಿಯಾಗಿರುವ ನೀರವ್ ಮೋದಿಯನ್ನು ಆರ್ಥಿಕ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.

ದೇಶದಲ್ಲೇ ಅತೀ ದೊಡ್ಡ ಹಗರಣದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣವೂ ಒಂದಾಗಿದ್ದು, ಇದಕ್ಕೆ ಪ್ರಮುಖವಾದ ಹೊಣೆಗಾರ ನೀರವ್ ಮೋದಿ. ಈ ಹಗರಣದ ನಂತರ ದೇಶ ಬಿಟ್ಟು ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇತರ ಪ್ರಕರಣಗಳಲ್ಲಿ ಇಂಗ್ಲೆಂಡ್ ಪೊಲೀಸರು ಅವರನ್ನು ಬಂಧಿಸಿತ್ತು. ಇದೀಗ ಅವರು ಜೈಲು ವಾಸವನ್ನೂ ಅನುಭವಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿಯನ್ನ ಲಂಡನ್ನ ಕೋರ್ಟ್ ನಿರಾಕರಿಸಿದೆ.
ಸದ್ಯ ಪಿಎಂಎಲ್ಎ ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದೆ. ಇದು ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್ಗಳಿಗೆ, ನೀರವ್ಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟಗೋಲು ಹಾಕಿಕೊಳ್ಳುಲು ಸಹಾಯಕವಾಗಲಿದೆ.