ಕರ್ನಾಟಕ

karnataka

ETV Bharat / bharat

ಸಿಎಂಗಳ ಜೊತೆ ಇಂದು ಪಿಎಂ ವಿಡಿಯೋ ಸಂವಾದ: ಹಾಜರಾಗದಿರಲು ದೀದಿ ನಿರ್ಧಾರ - ಪಶ್ಚಿಮ ಬಂಗಾಳದ ಸಿಎಂ

ಕೊರೊನಾ ನಿಯಂತ್ರಣ ಹಾಗೂ ಲಾಕ್​ಡೌನ್​ ಸಡಿಲಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸುತ್ತಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಧಾನಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

PM video conversation today with CMs
ಸಿಎಂಗಳ ಜೊತೆ ಇಂದು ಪಿಎಂ ವಿಡಿಯೋ ಸಂವಾದ

By

Published : Jun 17, 2020, 8:16 AM IST

ನವದೆಹಲಿ: ಹೆಚ್ಚು ಕೊರೊನಾ ಪ್ರಕರಣಗಳು ಇರುವ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್​, ಉತ್ತರ ಪ್ರದೇಶ, ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ಜತೆ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸಿಎಂ ಮತ್ತು ಲೆಫ್ಟಿನೆಂಟ್​ ಗವರ್ನರ್​ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.

ನಿಯಮ ಸಡಿಲಿಕೆ ಅವಕಾಶ ಕೇಳಲಿರುವ ಸಿಎಂ ಬಿಎಸ್​ವೈ

ಕೊರೊನಾ ನಿಯಂತ್ರಣ ಹಾಗೂ ಲಾಕ್​ಡೌನ್​ ಸಡಿಲಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸುತ್ತಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಧಾನಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಹೆಚ್ಚು ಅನ್​ಲಾಕ್​ಗೆ ಅವಕಾಶ ನೀಡುವಂತೆ ಸಿಎಂ ಬಿಎಸ್​​ವೈ ಪ್ರಧಾನಿ ಅವರನ್ನ ಕೇಳಲಿದ್ದಾರೆ.

ಸಭೆಯಲ್ಲಿ ಭಾಗವಹಿಸದಿರಲು ದೀದಿ ನಿರ್ಧಾರ

ದೇಶದಲ್ಲಿ ಕೋವಿಡ್​ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಭಾಗವಹಿಸದಿರಲು ನಿರ್ಧರಿಸಿದ್ದಾರೆ.ಮುಖ್ಯಮಂತ್ರಿಗಳಿಂದ ಸಲಹೆಗಳನ್ನು ಪಡೆದು, ಕಾರ್ಯತಂತ್ರ ರೂಪಿಸುವ ಮೂಲಕ ಭವಿಷ್ಯದಲ್ಲಿ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಕ್ರಮಗಳನ್ನು ಕೈಗೊಳ್ಳಲೆಂದು ಪಿಎಂ ಮೋದಿ ಈ ಸಭೆ ಕರೆದಿದ್ದಾರೆ.

ABOUT THE AUTHOR

...view details