ಕರ್ನಾಟಕ

karnataka

ETV Bharat / bharat

ಸಂಸದೀಯ ಸಭೆಗೆ ಕೇಂದ್ರ ಸಚಿವರು ಚಕ್ಕರ್​... ಸಂಜೆಯೊಳಗೆ ಹೆಸರು ನೀಡುವಂತೆ ಮೋದಿ ವಾರ್ನ್​! - ಪ್ರಧಾನಿ ಮೋದಿ

ಪ್ರತಿ ವಾರ ನಡೆಯುತ್ತಿರುವ ಸಂಸದೀಯ ಸಭೆಗೆ ಕೇಂದ್ರ ಸಚಿವರು ಚಕ್ಕರ್​ ಹಾಕುತ್ತಿರುವುದರಿಂದ ಪ್ರಧಾನಿ ಮೋದಿ ಗರಂ ಆಗಿದ್ದು, ಸಂಜೆಯೊಳಗೆ ಸಚಿವರ ಲಿಸ್ಟ್​ ನೀಡುವಂತೆ ವಾರ್ನ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನರೇಂದ್ರ ಮೋದಿ

By

Published : Jul 16, 2019, 4:49 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರತಿ ವಾರ ನಡೆಯುತ್ತಿರುವ ಬಿಜೆಪಿ ಸಂಸದೀಯ ಸಭೆಗೆ ಗೈರು ಹಾಜರಾಗುತ್ತಿರುವ ಕೇಂದ್ರ ಸಚಿವರ ಪಟ್ಟಿ ನೀಡುವಂತೆ ಪ್ರಧಾನಿ ವಾರ್ನ್​ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಈಗಾಗಲೇ ಸಂಸದೀಯ ಸಭೆಗೆ ಹಾಜರಾಗುವಂತೆ ಬಿಜೆಪಿಯ ಎಲ್ಲ ಸಚಿವರಿಗೂ ಸೂಚನೆ ನೀಡಲಾಗಿದ್ದು,ಆದರೂ ವಿವಿಧ ಕಾರಣ ಹೇಳಿ ಸಭೆಯಿಂದ ಗೈರು ಹಾಜರಾಗುತ್ತಿದ್ದು, ಇದೇ ವಿಷಯಕ್ಕೆ ಪ್ರಧಾನಿ ಮೋದಿ ಆಕ್ರೋಶಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮೇಲಿಂದ ಮೇಲೆ ಸಭೆಗೆ ಹಾಜರಾಗುತ್ತಿರುವ ಸಚಿವರ ಪಟ್ಟಿ ಸಂಜೆಯೊಳಗೆ ನೀಡುವಂತೆ ಮೋದಿ ತಿಳಿಸಿದ್ದಾರೆ.

ಕಳೆದ ಮಂಗಳವಾರ ಪಾರ್ಲಿಮೆಂಟ್​ನ​ ಲೈಬ್ರರಿ ಬಿಲ್ಡಿಂಗ್​​ನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಪ್ರಲ್ಹಾದ್​ ಜೋಶಿ, ಎಸ್​ ಜೈಶಂಕರ್​​ ಹಾಗೂ ಮುರಳೀಧರನ್​ ಸೇರಿದಂತೆ ಪ್ರಮುಖರು ಹಾಜರಿದ್ದರು. ಆದರೆ ಈ ಸಭೆಗೆ ಕೆಲ ಸಚಿವರು ಗೈರು ಹಾಜರಾಗಿದ್ದರು. ಹೀಗಾಗಿ ಮೋದಿ ಗರಂ ಆಗಿದ್ದು, ತಕ್ಷಣ ಅವರ ಪಟ್ಟಿ ನೀಡುವಂತೆ ತಿಳಿಸಿದ್ದಾರೆ.

ಈಗಾಗಲೇ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ಎಲ್ಲ ಸಂಸದರು ಹಾಗೂ ಸಚಿವರು ಹಾಜರಾಗುವಂತೆ ಮೋದಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details