ಕರ್ನಾಟಕ

karnataka

ETV Bharat / bharat

ಇಂದು ಚೆನ್ನೈ- ಅಂಡಮಾನ್- ನಿಕೋಬಾರ್ ಜಲಾಂತರ್ಗಾಮಿ ಕೇಬಲ್ ಯೋಜನೆ ಉದ್ಘಾಟನೆ - ಪ್ರಧಾನಿ ನರೇಂದ್ರ ಮೋದಿ

ಚೆನ್ನೈ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಡುವಿನ ಜಲಾಂತರ್ಗಾಮಿ ಸಂವಹನ ಕೇಬಲ್ ಯೋಜನೆಯನ್ನು ಪಿಎಂ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಚೆನ್ನೈನಿಂದ ಪೋರ್ಟ್ ಬ್ಲೇರ್ ಮತ್ತು ಇತರ ಏಳು ದ್ವೀಪಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ.

modi
modi

By

Published : Aug 10, 2020, 9:30 AM IST

ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್): ಪ್ರಧಾನಿ ನರೇಂದ್ರ ಮೋದಿ ಇಂದು ಚೆನ್ನೈ - ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆ ಉದ್ಘಾಟಿಸಲಿದ್ದು, ಇದು ದ್ವೀಪಸಮೂಹಕ್ಕೆ ಉತ್ತಮ ಸಂಪರ್ಕ ಒದಗಿಸುತ್ತದೆ ಎಂದು ಬಿಎಸ್ಎನ್ಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲಾಂತರ್ಗಾಮಿ ಸಂವಹನ ಕೇಬಲ್ ಎಂದರೆ ಸಾಗರ ಮತ್ತು ಸಮುದ್ರದ ಉದ್ದಕ್ಕೂ ದೂರಸಂಪರ್ಕ ಸಂಕೇತಗಳನ್ನು ರವಾನಿಸಲು ಭೂ - ಆಧಾರಿತ ನಿಲ್ದಾಣಗಳ ನಡುವೆ ಸಮುದ್ರತಳದಲ್ಲಿ ಹಾಕಿದ ಕೇಬಲ್ ಆಗಿದೆ.

"ಚೆನ್ನೈ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಕನೆಕ್ಟಿವಿಟಿ ಯೋಜನೆಯ ಕಾರ್ಯ ಮುಗಿದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ" ಎಂದು ಅಂಡಮಾನ್ ಮತ್ತು ನಿಕೋಬಾರ್ ಟೆಲಿಕಾಂನ ಬಿಎಸ್ಎನ್ಎಲ್ ಮುಖ್ಯ ಜನರಲ್ ಮ್ಯಾನೇಜರ್ ಮುರಳಿ ಕೃಷ್ಣ ಅವರುಅಂಡಮಾನ್ ಮತ್ತು ನಿಕೋಬಾರ್​ನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಯೋಜನೆಯು ಚೆನ್ನೈನಿಂದ ಪೋರ್ಟ್ ಬ್ಲೇರ್ ಮತ್ತು ಇತರ ಏಳು ದ್ವೀಪಗಳಾದ ಸ್ವರಾಜ್ ಡೀಪ್ (ಹ್ಯಾವ್ಲಾಕ್), ಲಾಂಗ್ ಐಲ್ಯಾಂಡ್, ರಂಗತ್, ಹಟ್ಬೇ (ಲಿಟಲ್ ಅಂಡಮಾನ್), ಕಮೋರ್ಟಾ, ಕಾರ್ ನಿಕೋಬಾರ್ ಮತ್ತು ಕ್ಯಾಂಪ್ಬೆಲ್ ಬೇ (ಗ್ರೇಟ್ ನಿಕೋಬಾರ್)ಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ.

ABOUT THE AUTHOR

...view details