ಕರ್ನಾಟಕ

karnataka

ETV Bharat / bharat

7 ರಾಜ್ಯದ ಸಿಎಂಗಳ ಜೊತೆ ನಾಳೆ ಪ್ರಧಾನಿ ಮೋದಿ ಕೋವಿಡ್‌ ಪರಿಶೀಲನಾ‌ ಸಭೆ - 7 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪಿಎಂ ಮೋದಿ ಸಭೆ

ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಐದು ರಾಜ್ಯಗಳ ಜೊತೆಗೆ ಈಚೆಗೆ ಪಂಜಾಬ್‌ ಮತ್ತು ದೆಹಲಿ ಸೇರಿವೆ. ಮಹಾರಾಷ್ಟ್ರ, ಪಂಜಾಬ್‌ ಮತ್ತು ದೆಹಲಿಯಲ್ಲಿ ಶೇ.2ರಷ್ಟು ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಪಂಜಾಬ್‌ ಮತ್ತು ಉತ್ತರಪ್ರದೇಶದಲ್ಲಿ ಪಾಸಿಟಿವ್‌ ಪ್ರಕರಣ ದೇಶದ ಸರಾಸರಿ 8.52ಕ್ಕಿಂತ ಹೆಚ್ಚಾಗಿದೆ..

pm-to-chair-covid-review-meeting-with-cms-of-seven-high-burden-states
7 ರಾಜ್ಯಗಳ ಸಿಎಂ ಜೊತೆ ನಾಳೆ ಪ್ರಧಾನಿ ಮೋದಿ ಕೋವಿಡ್‌ ಪರಿಶೀಲನಾ‌ ಸಭೆ

By

Published : Sep 22, 2020, 3:47 PM IST

ನವದೆಹಲಿ :ಅತಿ ಹೆಚ್ಚು ಕೋವಿಡ್‌ ಪ್ರಕರಣ ಹೊಂದಿರುವ 7 ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆಪ್ರಧಾನಿ ನರೇಂದ್ರ ಮೋದಿ ನಾಳೆ ವರ್ಚುವಲ್‌ ಸಭೆ ನಡೆಸಲಿದ್ದಾರೆ.

ಆಸ್ಪತ್ರೆಗಳಲ್ಲಿ ಮೆಡಿಕಲ್‌ ಆಕ್ಸಿಜನ್ ಮತ್ತು ಚಿಕಿತ್ಸಾ ಸೌಲಭ್ಯಗಳ ಲಭ್ಯತೆ, ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್‌ ರಾಜ್ಯಗಳು ಕೋವಿಡ್‌ ಸೋಂಕಿತ ಪ್ರಕರಣಗಳಲ್ಲಿ ಅಗ್ರ ಸ್ಥಾನದಲ್ಲಿವೆ. ಶೇ.63 ರಷ್ಟು ಸಕ್ರಿಯ‌ ಪ್ರಕರಣಗಳು ಈ 7 ರಾಜ್ಯಗಳಲ್ಲೇ ಇವೆ.

ಶೇ.65.5ರಷ್ಟು ಒಟ್ಟು ಪ್ರಕರಣ ಹಾಗೂ ಶೇ.77ರಷ್ಟು ಸೋಂಕಿಗೆ ಬಲಿಯಾದವರಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಐದು ರಾಜ್ಯಗಳ ಜೊತೆಗೆ ಈಚೆಗೆ ಪಂಜಾಬ್‌ ಮತ್ತು ದೆಹಲಿ ಸೇರಿವೆ. ಮಹಾರಾಷ್ಟ್ರ, ಪಂಜಾಬ್‌ ಮತ್ತು ದೆಹಲಿಯಲ್ಲಿ ಶೇ.2ರಷ್ಟು ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಪಂಜಾಬ್‌ ಮತ್ತು ಉತ್ತರಪ್ರದೇಶದಲ್ಲಿ ಪಾಸಿಟಿವ್‌ ಪ್ರಕರಣ ದೇಶದ ಸರಾಸರಿ 8.52ಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ.

ಕೋವಿಡ್‌-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಹೆಲ್ತ್‌ಕೇರ್‌ ಮತ್ತು ವೈದ್ಯಕೀಯ ಸೌಲಭ್ಯಗಳ ಹೆಚ್ಚಳಕ್ಕೆ ಬೆಂಬಲ ನೀಡುತ್ತಿದೆ. ಈಗಾಗಲೇ ಹತ್ತಾರು ತಂಡಗಳನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ.

ABOUT THE AUTHOR

...view details